ಸೌತಾಂಪ್ಟನ್:ಆರಂಭಿಕ ಆಟಗಾರ ಪಾಲ್ ಸ್ಟಿರ್ಲಿಂಗ್ ಹಾಗೂ ಆಂಡಿ ಬಲ್ಬಿರ್ನೈ ದ್ವಿಶತಕದ ಜೊತೆಯಾಟದ ನೆರವಿನಿಂದ ಐರ್ಲೆಂಡ್ ತಂಡ ಇಂಗ್ಲೆಂಡ್ ವಿರುದ್ಧದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.
ಇಂಗ್ಲೆಂಡ್ ನೀಡಿದ್ದ 329 ಗುರಿ ಬೆನ್ನಟ್ಟಿದ ಐರ್ಲೆಂಡ್ ತಂಡಕ್ಕೆ ಆರಂಭಿಕ ಆಟಗಾರ ಪಾಲ್ ಸ್ಟಿರ್ಲಿಂಗ್ (128 ಎಸೆತಗಳಿಂದ 142) ಮತ್ತು ನಾಯಕ ಆಂಡಿ ಬಲ್ಬಿರ್ನೈ (112 ಎಸೆತಕ್ಕೆ 113) ಅವರ ಶತಕ ಪ್ರವಾಸಿ ತಂಡಕ್ಕೆ ಏಳು ವಿಕೆಟ್‌ಗಳ ಗೆಲುವು ಸಾಧಿಸಲು ನೆರವಾಯಿತು. ಈ ಇಬ್ಬರು ಆಟಗಾರರು 214 ರನ್‌ಗಳ ಜೊತೆಯಾಟವಾಡಿ ಇಂಗ್ಲೆಂಡ್ ಬೌಲರ್ಗಳ ಬೆವರಿಳಿಸಿದರು.
ಈ ಇಬ್ಬರು ಆಟಗಾರರ ನಿರ್ಗಮನದ ನಂತರ ಬಂದ ಹ್ಯಾರಿ ಟೆಕ್ಟರ್ (29) ಮತ್ತು ಕೆವಿನ್ ಒಬ್ರೇನ್ (21) ತಂಡವನ್ನು ಗೆಲುವಿನ ದಡ ಸೇರಿಸಿದ್ರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡಕ್ಕೆ ನಾಯಕ ಇಯಾನ್ ಮೋರ್ಗಾನ್ ಆಸರೆಯಾದ್ರು. 14ನೇ ಏಕದಿನ ಶತಕ ಸಿಡಿಸಿದ ಮೋರ್ಗಾನ್ ಇಂಗ್ಲೆಂಡ್ ತಂಡ ಬೃಹತ್ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು.
ಮೊದಲೆರಡು ಪಂದ್ಯಗಳನ್ನು ಗೆದ್ದು ಇಂಗ್ಲೆಂಡ್ ಸರಣಿ ವಶಪಡಿಸಿಕೊಂಡಿದ್ದು, ಇದು ಕೇವಲ ಔಪಚಾರಿಕ ಪಂದ್ಯವಾಗಿತ್ತು. ಆದರೆ ಕೊನೆಯ ಪಂದ್ಯದಲ್ಲಿ ಗೆದ್ದು ವೈಟ್‌ವಾಶ್ ಅವಮಾನದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದ ಐರ್ಲೆಂಡ್ ಯಶಸ್ವಿಯಾಗಿದೆ.