ಕರ್ನಾಟಕ

karnataka

ETV Bharat / sports

ಕೊನೆಯ ಪಂದ್ಯ ಸೋತರೂ ಆಸ್ಟ್ರೇಲಿಯಾ ವಿರುದ್ಧ 2-1ರಲ್ಲಿ ಸರಣಿ ಗೆದ್ದ ಇಂಗ್ಲೆಂಡ್​ - ಮಿಚೆಲ್ ಮಾರ್ಶ್​

ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್​ ನೀಡಿದ 146 ರನ್​ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ 19.3 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು ಗುರಿ ತಲುಪಿದೆ. ಆದರೆ ಸರಣಿಯನ್ನು ಇಂಗ್ಲೆಂಡ್ ತಂಡ 201ರಲ್ಲಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಆಸ್ಟ್ರೇಲಿಯಾ ವಿರುದ್ಧ 2-1ರಲ್ಲಿ ಸರಣಿ ಗೆದ್ದ ಇಂಗ್ಲೆಂಡ್​
ಆಸ್ಟ್ರೇಲಿಯಾ ವಿರುದ್ಧ 2-1ರಲ್ಲಿ ಸರಣಿ ಗೆದ್ದ ಇಂಗ್ಲೆಂಡ್​

By

Published : Sep 9, 2020, 4:22 PM IST

ಸೌತಾಂಪ್ಟನ್​: ಸ್ಪಿನ್​ ಬೌಲರ್​ಗಳ ಬಲ ಹಾಗೂ ಶಿಸ್ತಿನ ಬ್ಯಾಟಿಂಗ್ ಬಲದಿಂದ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್​ ವಿರುದ್ಧ 3ನೇ ಟಿ20 ಪಂದ್ಯವನ್ನು ಗೆದ್ದು ವೈಟ್​ವಾಷ್​​ ಅಪಮಾನದಿಂದ ಪಾರಾಗಿದೆ.

ಕೊನೆಯ ಪಂದ್ಯದಲ್ಲಿ ಇಂಗ್ಲೆಂಡ್​ ನೀಡಿದ 146 ರನ್​ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ 19.3 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು ಗುರಿ ತಲುಪಿದೆ. ಆದರೆ ಸರಣಿಯನ್ನು ಇಂಗ್ಲೆಂಡ್ ತಂಡ 201ರಲ್ಲಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇಂಗ್ಲೆಂಡ್​ ಪರ ಜಾನಿ ಬೈರ್ಸ್ಟೋವ್​ 55, ಮಲನ್​ 21, ಮೊಯಿನ್​ 23 ಹಾಗೂ ಜೋ ಡೆನ್ಲಿ 29 ರನ್​ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.

ಆಸೀಸ್​ ಪರ ಜಂಪಾ 2 ವಿಕೆಟ್​ ಪಡೆದರೆ, ಅಶ್ಟನ್​ ಅಗರ್​, ಕೇನ್ ರಿಚರ್ಡ್ಸನ್​, ಹೇಜಲ್​ವುಡ್​ ಹಾಗೂ ಸ್ಟಾರ್ಕ್​ ತಲಾ ಒಂದು ವಿಕೆಟ್ ಪಡೆದರು.

146 ರನ್​ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ನಾಯಕ ಫಿಂಚ್​ (39)ಹಾಗೂ ಮಿಚೆಲ್​ ಮಾರ್ಷ್​(39) ಹಾಗೂ ಸ್ಟೋಯ್ನಿಸ್​ರ (29) ಶಿಸ್ತಿನ ಬ್ಯಾಟಿಂಗ್​ ನೆರವಿನಿಂದ ಇನ್ನು ಮೂರು ಎಸೆತಗಳಿರುವಂತೆ ಗೆಲುವು ಸಾಧಿಸಿತು.

ಮಿಚೆಲ್​ ಮಾರ್ಷ್​ ಪಂದ್ಯ ಶ್ರೇಷ್ಠ ಹಾಗೂ ಜೋಸ್​ ಬಟ್ಲರ್​ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ABOUT THE AUTHOR

...view details