ಕರ್ನಾಟಕ

karnataka

ETV Bharat / sports

ಪಾಕ್​ ಬೌಲರ್​ಗಳನ್ನು ಬೆಂಡೆತ್ತಿದ ಕ್ರಾಲೆ, ಬಟ್ಲರ್​... ಮೊದಲ ದಿನ ಇಂಗ್ಲೆಂಡ್​ 332ಕ್ಕೆ 4ವಿಕೆಟ್​​ - ಯಾಸಿರ್​ ಶಾ

ಶುಕ್ರವಾರದಿಂದ ಸೌತಾಂಪ್ಟನ್​ನಲ್ಲಿ ಆರಂಭವಾಗಿರುವ ಅಂತಿಮ ಟೆಸ್ಟ್​ನಲ್ಲಿ ಆತಿಥೇಯ ಇಂಗ್ಲೆಂಡ್​ ತಂಡ ಭರ್ಜರಿ ಆರಂಭ ಪಡೆದಿದೆ. ಟಾಸ್​ ಗೆದ್ದ ಇಂಗ್ಲೆಂಡ್​ ಬ್ಯಾಟಿಂಗ್​ ಆಯ್ದುಕೊಂಡಿತ್ತಾದರೂ ಆರಂಭದಲ್ಲೇ ರೋನಿ ಬರ್ನ್ಸ್ 6 ರನ್​​ಗಳಿಸಿ ಅಫ್ರಿದಿಗೆ ವಿಕೆಟ್​ ಒಪ್ಪಿಸಿದರು. ಕ್ರಾಲೆ 2ನೇ ವಿಕೆಟ್​ಗೆ ಡಾಮ್​ ಸಿಬ್ಲೀ​(22) ಜೊತೆಗೆ 61 ರನ್​ ಸೇರಿಸಿದರು. ಸಿಬ್ಲೀ ಯಾಸಿರ್​ ಶಾ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು.

Eng v Pak, 3rd Test
ಇಂಗ್ಲೆಂಡ್​ ಪಾಕಿಸ್ತಾನ ಟೆಸ್ಟ್​

By

Published : Aug 22, 2020, 12:29 PM IST

ಸೌತಾಂಪ್ಟನ್​:ಯುವ ಬ್ಯಾಟ್ಸ್​ಮನ್​ ಜಾಕ್​ ಕ್ರಾಲೆ(171) ಅವರ ಅದ್ಭುತ ಶತಕದ ನೆರವಿಂದ ಇಂಗ್ಲೆಂಡ್​ ತಂಡ 322/4 ರನ್​ ಗಳಿಸಿ ಮೊದಲ ದಿನದ ಗೌರವ ಪಡೆದುಕೊಂಡಿದೆ.

ಶುಕ್ರವಾರದಿಂದ ಸೌತಾಂಪ್ಟನ್​ನಲ್ಲಿ ಆರಂಭವಾಗಿರುವ ಅಂತಿಮ ಟೆಸ್ಟ್​ನಲ್ಲಿ ಆತಿಥೇಯ ಇಂಗ್ಲೆಂಡ್​ ತಂಡ ಭರ್ಜರಿ ಆರಂಭ ಪಡೆದಿದೆ. ಟಾಸ್​ ಗೆದ್ದ ಇಂಗ್ಲೆಂಡ್​ ಬ್ಯಾಟಿಂಗ್​ ಆಯ್ದುಕೊಂಡಿತ್ತಾದರೂ ಆರಂಭದಲ್ಲೇ ರೋನಿ ಬರ್ನ್ಸ್ 6 ರನ್​ಗಳಿಸಿ ಅಫ್ರಿದಿಗೆ ವಿಕೆಟ್​ ಒಪ್ಪಿಸಿದರು. ಕ್ರಾಲೆ 2ನೇ ವಿಕೆಟ್​ಗೆ ಡಾಮ್​ ಸಿಬ್ಲೀ​(22) ಜೊತೆಗೆ 61 ರನ್​ ಸೇರಿಸಿದರು. ಸಿಬ್ಲೀ ಯಾಸಿರ್​ ಶಾ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು.

ನಂತರ ಕ್ರಾಲೆ ಜೊತೆಗೂಡಿದ ನಾಯಕ ರೂಟ್​(29) 41 ರನ್​ಗಳ ಜೊತೆಯಾಟ ನಡೆಸಿದರು. ಆದರೆ, 29 ರನ್​ ಗಳಿಸಿದ್ದ ವೇಳೆ ಯುವ ಬ್ಯಾಟ್ಸ್​ಮನ್​ ನಸೀಮ್​ ಬೌಲಿಂಗ್​ನಲ್ಲಿ ವಿಕೆಟ್​ ಕೀಪರ್​ ರಿಜ್ವಾನ್​ಗೆ ಕ್ಯಾಚ್​ ನೀಡಿ ಔಟಾದರು. ನಂತರ ಬಂದ ಒಲ್ಲಿ ಪೋಪ್​(3) ರನ್​ ಗಳಿಸಿ ಯಾಸಿರ್​ ಶಾ ಬೌಲಿಂಗ್​ನಲ್ಲಿ ಕ್ಲೀನ್​ ಬೌಲ್ಡ್​ ಆದರು.

ಆದರೆ, 5ನೇ ವಿಕೆಟ್​ ಜೊತೆಯಾಟದಲ್ಲಿ ಕ್ರಾಲೆ ಜೊತೆ ಒಂದಾದ ಕಳೆದ ಪಂದ್ಯದ ಹೀರೋ ಜೋಸ್​ ಬಟ್ಲರ್​(87) 200 ರನ್​ಗಳ ಜೊತೆಯಾಟ ನಡೆಸಿ ಇಂಗ್ಲೆಂಡ್​ ತಂಡವನ್ನು ಬೃಹತ್​ ಮೊತ್ತದತ್ತ ಕೊಂಡೊಯ್ದಿದ್ದಾರೆ.

269 ಎಸೆತಗಳನ್ನು ಎದುರಿಸಿರುವ ಕ್ರಾಲೆ 19 ಬೌಂಡರಿಗಳಿಂದ ಔಟಾಗದೇ 171 ರನ್ ​ಗಳಿಸಿದ್ದಾರೆ. ಬಟ್ಲರ್​ 148 ಎಸೆತಗಳಲ್ಲಿ 2 ಸಿಕ್ಸರ್​ ಹಾಗೂ 9 ಬೌಂಡರಿ ಸಹಿತ ಔಟಾಗದೇ 87 ರನ್​ ಗಳಿಸಿ 2ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಪಾಕಿಸ್ತಾನ ಪರ ಯಾಸಿರ್​ ಶಾ 2 ವಿಕೆಟ್, ನಸೀಮ್ ಹಾಗೂ ಶಾಹೀನ್​ ಅಫ್ರಿದಿ ತಲಾ ಒಂದು ವಿಕೆಟ್ ಪಡೆದಿದ್ದಾರೆ.

ABOUT THE AUTHOR

...view details