ನವದೆಹಲಿ:ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಶನಿವಾರ ಅನಾರೋಗ್ಯದಿಂದ ಮೃತಪಟ್ಟ ಮಾಜಿ ಹಣಕಾಸು ಸಚಿವಾ ಹಾಗೂ ಮಾಜಿ ಡಿಡಿಸಿಎ ಅದ್ಯಕ್ಷ ಅರುಣ್ ಜೇಟ್ಲಿ ನಿಧನಕ್ಕೆ ಭಾವನಾತ್ಮಕ ಸಂತಾಪ ಸಲ್ಲಿಸಿದ್ದಾರೆ.
ಭಾರತ ಕಂಡ ಅತ್ಯುತ್ತಮ ರಾಜಕಾರಣಿಯಾಗಿದ್ದ ಅರುಣ್ ಜೇಟ್ಲಿ ಶನಿವಾರ ಅನಾರೋಗ್ಯ ಕಾರಣದಿಂದ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಅವರ ನಿಧನಕ್ಕೆ ಕಂಬನಿ ಮಿಡಿದಿರುವ ಭಾರತ ತಂಡದ ಮಾಜಿ ಕ್ರಿಕೆಟಿಗ ಸೆಹ್ವಾಗ್, ತನ್ನ ವೃತ್ತಿ ಜೀವನದ ಆರಂಭಕ್ಕೆ ಕಾರಣರಾಗಿದ್ದ ಜೇಟ್ಲಿ ಅವರ ನಿಧನದ ಸುದ್ದಿ ತುಂಬಾ ನೋವು ತಂದಿದೆ ಎಂದು ಭಾವಾನಾತ್ಮಕವಾಗಿ ತಿಳಿಸಿದ್ದಾರೆ.
ಸತತ 13 ವರ್ಷಗಳ ಡೆಲ್ಲಿ ಕ್ರಿಕೆಟ್ ಅಸೋಶಿಯೇಷನ್ನಲ್ಲಿ ಅಧ್ಯಕ್ಷರಾಗಿದ್ದ ಜೇಟ್ಲಿ, ಸೆಹ್ವಾಗ್ ಭಾರತ ಕ್ರಿಕೆಟ್ ತಂಡಕ್ಕೆ ಸೇರಿಕೊಳ್ಳಲು ನೆರವಾಗಿದ್ದರು. ಸೆಹ್ವಾಗ್ ಅಲ್ಲದೆ ಡೆಲ್ಲಿ ಮೂಲದ ಹಲವಾರು ಕ್ರಿಕೆಟಿಗರ ಜೀವನ ರೂಪಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದರು. ಅವರ ಕಾಲದಲ್ಲಿಯೇ ಭಾರತ ತಂಡಕ್ಕೆ ಹೆಚ್ಚು ಡೆಲ್ಲಿ ಮೂಲದ ಆಟಗಾರರು ಸೇರಿದ್ದರು ಎಂದು ಈ ಸಂದರ್ಭದಲ್ಲಿ ನೆನೆಪಿಸಿಕೊಂಡಿದ್ದಾರೆ.
ಜೇಟ್ಲಿ ಕೇವಲ ಅಧ್ಯಕ್ಷರಾಗಿದರೆ, ಆಟಗಾರರ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು. ನಾನು ವೈಯಕ್ತಿಕವಾಗಿ ಅವರ ಜೊತೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದೆ. ಅಗಲಿಕೆ ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ ಎಂದು ಸೆಹ್ವಾಗ್ ಸಂತಾಪ ಸೂಚಿಸಿದ್ದಾರೆ.