ಸಿಡ್ನಿ:ಆಸ್ಟ್ರೇಲಿಯಾ ಮಹಿಳಾ ತಂಡದ ಆಲ್ರೌಂಡರ್ ಎಲಿಸ್ ಪೆರ್ರಿ, ಮುರುಳಿ ವಿಜಯ್ ಅವರ ಬಯಕೆಯಂತೆ ಜೊತೆಯಾಗಿ ಡಿನ್ನರ್ ಮಾಡುವ ವಿಚಾರಕ್ಕೆ ತಮಾಷೆಯ ಉತ್ತರ ನೀಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಇನ್ಸ್ಟಾಗ್ರಾಮ್ ಲೈವ್ನಲ್ಲಿ ಆ್ಯಂಕರ್ ರೂಪ ರಮಣಿ ನಡೆಸಿದ ಲೈವ್ ಕಾರ್ಯಕ್ರಮದಲ್ಲಿ ಯಾವ ಕ್ರಿಕೆಟಿಗರ ಜೊತೆ ಡಿನ್ನರ್ಗೆ ಹೋಗುತ್ತೀರ? ಎಂಬುದಕ್ಕೆ ವಿಜಯ್ ಆಸ್ಟ್ರೇಲಿಯಾದ ಎಲಿಸ್ ಪೆರ್ರಿ ಹಾಗೂ ಭಾರತದ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಅವರ ಹೆಸರನ್ನು ಸೂಚಿಸಿದ್ದರು.
"ಎಲಿಸ್ ಪೆರ್ರಿ, ತುಂಬಾ ಸುಂದರವಾಗಿದ್ದಾರೆ ಅದಕ್ಕಾಗಿ, ಧವನ್ ತುಂಬಾ ತಮಾಷೆ ಮಾಡುತ್ತಾರೆ, ನಾವಿಬ್ಬರು ಜೊತೆ ಸೇರಿದಾಗ ಅವರು ಹಿಂದಿಯಲ್ಲಿ ಮಾತನಾಡಿದರೆ, ನಾನು ತಮಿಳಿನಲ್ಲಿ ಉತ್ತರಿಸುತ್ತೇನೆ" ಇದ್ದಕ್ಕಾಗಿ ಇವರಿಬ್ಬರನ್ನು ಆಯ್ಕೆ ಮಾಡಿರುವುದಾಗಿ ವಿಜಯ್ ತಿಳಿಸಿದ್ದರು.
ರಿಧಿಮಾ ಪಠಾಕ್ ನಡೆಸಿದ ಲೈವ್, ಕಾರ್ಯಕ್ರಮದಲ್ಲಿ ವಿಜಯ್ ಅವರ ಬಯಕೆಯ ವಿಚಾರವನ್ನು ಪೆರ್ರಿಗೆ ತಿಳಿಸಿದ್ದಾರೆ. "ಅವರೇ ಬಿಲ್ ಪಾವತಿಸಲಿದ್ದಾರೆಂದು ಭಾವಿಸಿದ್ದೇನೆ ಎಂದು ಪೆರ್ರಿ ತಮಾಷೆಯಾಗಿ ಉತ್ತರಿಸಿದ್ದಾರೆ, ಇನ್ನು ಸುಂದರವಾಗಿದ್ದಾರೆ ಎಂಬ ವಿಜಯ್ ಕಾಮೆಂಟ್ಗೆ ಪ್ರಶಂಶಿಸುತ್ತೇನೆ ಎಂದು ಪೆರ್ರಿ ಹೇಳಿದ್ದಾರೆ.
5ನೇ ಬಾರಿಗೆ ಟಿ20 ವಿಶ್ವಚಾಂಪಿಯನ್ ಆದ ಆಸ್ಟ್ರೇಲಿಯಾ ತಂಡ ಭಾಗವಾಗಿದ್ದ ಪೆರ್ರಿ ಗಾಯದ ಕಾರಣ ಭಾರತದ ವಿರುದ್ಧದ ಫೈನಲ್ ಪಂದ್ಯದಿಂದ ಹೊರಗುಳಿದಿದ್ದರು. ಪೆರ್ರಿ ವಿರಾಟ್,ಎಬಿಡಿ,ಡೇಲ್ ಸ್ಟೈನ್ ಹಾಗೂ ಸ್ಟಿವ್ ಸ್ಮಿತ್ ಜೊತೆಗೆ ದಶಕದ ವಿಸ್ಟನ್ ಕ್ರಿಕೆಟರ್ ಗೌರವಕ್ಕೆ ಪಾತ್ರರಾಗಿದ್ದರು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 5000 ರನ್ ಹಾಗೂ 200 ವಿಕೆಟ್ ಪಡೆದಿರುವ ಪೆರ್ರಿ ವಿಶ್ವದ ಅತ್ಯುತ್ತಮ ಮಹಿಳಾ ಆಲ್ರೌಂಡರ್ ಎಂಬ ಖ್ಯಾತಿ ಪಡೆದಿದ್ದಾರೆ.