ಕರ್ನಾಟಕ

karnataka

ETV Bharat / sports

ದಕ್ಷಿಣ ಆಫ್ರಿಕ ಸರಣಿಯಿಂದ ಮ್ಯಾಕ್ಸ್​ವೆಲ್​ ಔಟ್​... ಐಪಿಎಲ್​ಗೂ ತಡವಾಗಿ ಬರುವ ಸಾಧ್ಯತೆ - ಮ್ಯಾಕ್ಸ್​ವೆಲ್​ಗೆ ​ಮೊಣಕೈ ಸರ್ಜರಿ

ಕಿಂಗ್ಸ್​ ಇಲೆವೆನ್​ ತಂಡ ಗ್ಲೇನ್​ ಮ್ಯಾಕ್ಸ್​ವೆಲ್ ಅವ​ರನ್ನು 10.5 ಕೋಟಿ ರೂ ನೀಡಿ ಖರೀದಿಸಿತ್ತು. ಇದೀಗ ಗುರುವಾರ ಮೊಣಕೈ ಸರ್ಜರಿಗೆ ಒಳಗಾಗುತ್ತಿರುವ ಗ್ಲೇನ್​ ಮ್ಯಾಕ್ಸ್​ವೆಲ್​ಗೆ 6 ರಿಂದ 8 ವಾರಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ಕ್ರಿಕೆಟ್​ ಆಸ್ಟ್ರೇಲಿಯಾ ಮೂಲಗಳಿಂದ ತಿಳಿದುಬಂದಿದೆ.

Glenn Maxwell  out of SA tour
ದಕ್ಷಿಣ ಆಫ್ರಿಕಾ ಸರಣಿಯಿಂದ ಮ್ಯಾಕ್ಸ್​ವೆಲ್​ ಔಟ್

By

Published : Feb 12, 2020, 1:43 PM IST

ಮೆಲ್ಬೋರ್ನ್​: ಆಸ್ಟ್ರೇಲಿಯಾದ ಸ್ಟಾರ್​ ಆಲ್​ರೌಂಡರ್​ ಗ್ಲೇನ್​ ಮ್ಯಾಕ್ಸ್​ವೆಲ್​ ಮೊಣಕೈ ಸರ್ಜರಿಗೆ ಒಳಗಾಗುತ್ತಿರುವುದರಿಂದ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಅಲ್ಲದೇ ಐಪಿಎಲ್​ಗೂ ತಡವಾಗಿ ತಂಡಕ್ಕೆ ಸೇರಿಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಕಿಂಗ್ಸ್​ ಇಲೆವೆನ್​ ತಂಡ ಗ್ಲೇನ್​ ಮ್ಯಾಕ್ಸ್​ವೆಲ್​ರನ್ನು 10.5 ಕೋಟಿ ರೂ ನೀಡಿ ಖರೀದಿಸಿತ್ತು. ಇದೀಗ ಗುರುವಾರ ಮೊಣಕೈ ಸರ್ಜರಿಗೆ ಒಳಗಾಗುತ್ತಿರುವ ಗ್ಲೇನ್​ ಮ್ಯಾಕ್ಸ್​ವೆಲ್​ಗೆ 6 ರಿಂದ 8 ವಾರಗಳ ಕಾಲ ವಿಶ್ರಾಂತಿ ಅಗತ್ಯವಿದೆ ಎಂದು ಕ್ರಿಕೆಟ್​ ಆಸ್ಟ್ರೇಲಿಯಾ ಮೂಲಗಳಿಂದ ತಿಳಿದು ಬಂದಿದೆ.

ಗ್ಲೇನ್​ ಮ್ಯಾಕ್ಸ್​ವೆಲ್​ ಬಿಗ್​ಬ್ಯಾಶ್​ನಲ್ಲಿ ಫೈನಲ್ ಆಡುವ ವೇಳೆ ಮೊಣಕೈ ಗಾಯಕ್ಕೆ ತುತ್ತಾಗಿದ್ದಾರೆ. ಇದರಿಂದ ಮುಂದಿನ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದಲೂ ಹೊರಬಿದ್ದಿದ್ದಾರೆ. ಇವರ ಬದಲು ಕ್ರಿಕೆಟ್ ಆಸ್ಟ್ರೇಲಿಯಾ ಆಯ್ಕೆ ಸಮಿತಿ ಆಲ್​ರೌಂಡರ್​ ಡಾರ್ಸಿ ಶಾರ್ಟ್​ರನ್ನು ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ.

2020ರ ಐಪಿಎಲ್​ ಮಾರ್ಚ್​ ಕೊನೆ ವಾರದಲ್ಲಿ ಆರಂಭವಾಗಲಿದೆ. ಹೀಗಾಗಿ ಐಪಿಎಲ್​ ಮೊದಲ ಒಂದೆರಡು ವಾರ ಅವರ ಸೌಲಭ್ಯ ಪಂಜಾಬ್​ ತಂಡಕ್ಕೆ ಸಿಗುತ್ತಿಲ್ಲ. 2019 ಸೀಸನ್​ನಲ್ಲೂ ಟೆಸ್ಟ್​ ಕ್ರಿಕೆಟ್​ನತ್ತ ಗಮನ ನೀಡಲು ಮ್ಯಾಕ್ಸ್​ವಲ್​ ಭಾಗವಹಿಸಿರಲಿಲ್ಲ. ಇದೀಗ 2020ರ ಐಪಿಎಲ್​ನಲ್ಲೂ ಗಾಯದ ಕಾರಣ ತಪ್ಪಿಸಿಕೊಳ್ಳುತ್ತಿದ್ದಾರೆ. ಮ್ಯಾಕ್ಸ್​ವೆಲ್​ 69 ಐಪಿಎಲ್​ ಪಂದ್ಯಗಳನ್ನಾಡಿದ್ದು 1397 ರನ್​ಗಳಿಸಿದ್ದಾರೆ.

ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಫೆಬ್ರವರಿ 21 ರಿಂದ ಏಕದಿನ ಹಾಗೂ ಟಿ-20 ಸರಣಿ ಆಡಲಿದೆ.

ABOUT THE AUTHOR

...view details