ಲೀಡ್ಸ್:ಜುವೆಂಟಸ್ನ ಅರ್ಜೆಂಟೈನಾದ ಸ್ಟ್ರೈಕರ್ ಪಾಲೋ ಡೈಬಾಲಾ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿ ನೆಗಿಟಿವ್ ವರದಿ ಬಂದು ತಿಂಗಳಾದರೂ ಸಂಪೂರ್ಣ ಫಿಟ್ ಆಗಿಲ್ಲ ಎಂದು ಭಾನುವಾರ ಬಹಿರಂಗಪಡಿಸಿದ್ದಾರೆ.
ಡೈಬಾಲಾ ಮತ್ತು ಅವರ ಸಂಗಾತಿ ಒರಿಯಾನಾ ಸಬಾಟಿನಿ ಅವರಿಗೆ ಕೊರೊನಾ ಪರೀಕ್ಷೆಯಲ್ಲಿ ಧನಾತ್ಮಕ ವರದಿ ದೃಢಪಟ್ಟಿತ್ತು. ನಂತರ ಒಂದು ತಿಂಗಳ ಕಾಲ ಐಸೊಲೇಷನ್ನಲ್ಲಿದ್ದ ಅವರಿಗೆ ಮೇ 6 ರಂದು ನಡೆಸಿದ ಕೊರೊನಾ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿತ್ತು.
ನಾನು ಕೊರೊನಾ ವೈರಸ್ ಸೋಂಕಿಗೆ ಒಳಪಟ್ಟಿದ್ದೆ, ಈಗ ನನ್ನ ಆರೋಗ್ಯ ಉತ್ತಮವಾಗಿದೆ. ಆದರೆ, ನಾನು ಶೇ 100 ರಷ್ಟು ಫಿಟ್ ಆಗಿಲ್ಲ. ನಾವು ಈಗಾಗಲೇ ತರಬೇತಿ ಆರಂಭಿಸಿದ್ದೇವೆ. ಫುಟ್ಬಾಲ್ ಮರಳಿ ಬಂದಿದೆ. ಆದಷ್ಟು ಬೇಗ ನಾವು ಹೆಚ್ಚು ಇಷ್ಟಪಡುವುದನ್ನು ಮಾಡಲು ನಮಗೆ ಸಾಧ್ಯವಾಗುತ್ತದೆ ಎಂದು ಇನ್ಸ್ಟಾಗ್ರಾಂ ಲೈವ್ನಲ್ಲಿ ಹೇಳಿಕೊಂಡಿದ್ದಾರೆ.
ಫುಟ್ಬಾಲ್ ಆರಂಭವಾದ ಮೇಲೆ ನಾವು ಸಾಕಷ್ಟು ಆನಂದಿಸಬಹುದು ಮತ್ತು ಮನರಂಜಿಸಬಹುದು ಎಂದು ನಾನು ಭಾವಿಸುತ್ತೇವೆ. ನಾಬು ಸತತ ಅನೇಕ ಫುಟ್ಬಾಲ್ ಪಂದ್ಯಗಳನ್ನು ಹೊಂದಿರುವುದರಿಂದ ತುಂಬಾ ಉಪಯೋಗವಾಗಲಿದೆ. ಮತ್ತು ಈ ಅದ್ಭುತ ಕ್ರೀಡೆಯನ್ನು ಇಷ್ಟಪಡುವ ನಮ್ಮಂತಹ ಜನರಿಗೆ ಪ್ರತಿದಿನ ಬೇರೆ ಆಟವನ್ನು ವೀಕ್ಷಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ.