ಕರ್ನಾಟಕ

karnataka

ETV Bharat / sports

ಮಕ್ಕಳ ಸಂಕಷ್ಟಕ್ಕೆ ಮಿಡಿದ ಮನ... ಬ್ಯಾಟ್​, ಜರ್ಸಿ ಮಾರಾಟಕ್ಕಿಟ್ಟ ಡುಪ್ಲೆಸಿಸ್​! - ಫಾಫು ಡುಪ್ಲೆಸಿಸ್​

ದುರ್ಬಲ ಮಕ್ಕಳಿಗೆ ನೆರವು ನೀಡುವ ಸಲುವಾಗಿ ದಕ್ಷಿಣ ಆಫ್ರಿಕಾ ಸ್ಟಾರ್​ ಬ್ಯಾಟ್ಸ್​​ಮನ್​ ಡುಪ್ಲೆಸಿಸ್​ ಮನ ಮಿಡಿದಿದ್ದು, ಇದೀಗ ಸಹಾಯ ಮಾಡಲು ಮುಂದಾಗಿದ್ದಾರೆ.

Du Plessis
Du Plessis

By

Published : Jul 18, 2020, 5:16 PM IST

ಜೋಹಾನ್ಸ್​ಬರ್ಗ್​:ದಕ್ಷಿಣ ಆಫ್ರಿಕಾ ಕ್ರಿಕೆಟ್​ ತಂಡದ ಸ್ಟಾರ್​ ಆಟಗಾರ ಫಾಪ್​ ಡುಪ್ಲೆಸಿಸ್​​ ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ಬ್ಯಾಟ್​ ಹಾಗೂ ಜರ್ಸಿ ದೇಣಿಗೆ ನೀಡಿದ್ದಾರೆ.

ಟ್​, ಜರ್ಸಿ ಮಾರಾಟಕ್ಕಿಟ್ಟ ಡುಪ್ಲೆಸಿಸ್​

ದುರ್ಬಲ ಮಕ್ಕಳ ಸಂಕಷ್ಟಕ್ಕೆ ಸಹಾಯ ಮಾಡುವ ಉದ್ದೇಶದಿಂದ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕ್ರಿಕೆಟ್​​ ಪಂದ್ಯಗಳಲ್ಲಿ ತಾವು ಬಳಕೆ ಮಾಡ್ತಿದ್ದ ಬ್ಯಾಟ್​ ಹಾಗೂ ಏಕದಿನ ಪಂದ್ಯವೊಂದರಲ್ಲಿ ಈ ಹಿಂದೆ ಹಾಕಿಕೊಂಡಿದ್ದ ಗುಲಾಬಿ ಬಣ್ಣದ ಜೆರ್ಸಿ ದೇಣಿಗೆ ನೀಡಿದ್ದಾರೆ.

ಪ್ರಪಂಚದಾದ್ಯಂತ ಕೊರೊನಾ ಅಬ್ಬರ ಜೋರಾಗಿದ್ದು, ಕಷ್ಟದಲ್ಲಿರುವ ಮಕ್ಕಳಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ. ಹೀಗಾಗಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದಿರುವ ಅವರು, ಎಬಿ ಡಿವಿಲಿಯರ್ಸ್​​ ಹಾಕಿದ್ದ ಸವಾಲು ಸ್ವೀಕರಿಸಿದ್ದೇನೆ ಎಂದಿದ್ದಾರೆ.

ABOUT THE AUTHOR

...view details