ರಾಜ್ಕೋಟ್:ವಿಶ್ವಕಪ್ನಲ್ಲಿ ಗಾಯಗೊಂಡ ನಂತರ ತಮ್ಮ ಅಸಲಿ ಫಾರ್ಮ್ ಕಂಡುಕೊಳ್ಳುವಲ್ಲಿ ವಿಫಲರಾಗಿರುವ ಆರಂಭಿಕ ಆಟಗಾರ ಧವನ್ರನ್ನು ತಂಡದಿಂದ ಕೈಬಿಟ್ಟು ಕೆ ಎಲ್ ರಾಹುಲ್ಗೆ ಅವಕಾಶ ನೀಡಬೇಕು ಎಂದು ಭಾರತ ತಂಡದ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಕೆ. ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.
ಟಿ20 ವಿಶ್ವಕಪ್ ಗೆಲ್ಲಬೇಕಾದ್ರೆ ಧವನ್ ಕೈಬಿಟ್ಟು, ರಾಹುಲ್ಗೆ ಆರಂಭಿಕ ಸ್ಥಾನ ನೀಡಬೇಕು
ಬಾಂಗ್ಲಾದೇಶದ ವಿರುದ್ಧದ ಮೊದಲ ಪಂದ್ಯದಲ್ಲಿ 42 ಎಸೆತಗಳನ್ನೆದುರಿಸಿ 41ರನ್ ಗಳಿಸಿದ್ದ ಧವನ್ರನ್ನು ತಂಡದಿಂದ ಕೈಬಿಟ್ಟು ಕೆ ಎಲ್ ರಾಹುಲ್ಗೆ ಅವಕಾಶ ನೀಡಬೇಕು ಎಂದು ಭಾರತದ ಮಾಜಿ ಆಟಗಾರ ಕೆ ಶ್ರೀಕಾಂತ್ ಅಭಿಪ್ರಾಯ ಪಟ್ಟಿದ್ದಾರೆ.
ಬಾಂಗ್ಲಾದೇಶದ ವಿರುದ್ಧದ ಮೊದಲ ಪಂದ್ಯದಲ್ಲಿ 42 ಎಸೆತಗಳನ್ನೆದುರಿಸಿ 41ರನ್ ಗಳಿಸಿದ್ದರು. ಶ್ರೀಕಾಂತ್ ಈ ವಿಚಾರವನ್ನು ಉದಾಹರಣೆಯಾಗಿ ತೆಗೆದುಕೊಂಡು ಧವನ್ ತಂಡದ ಹಿರಿಯ ಆಟಗಾರನಾಗಿದ್ದು ,ಪವರ್ ಪ್ಲೇನಲ್ಲಿ ರನ್ ಗಳಿಸಲು ಪರದಾಡುತ್ತಿರುವುದು ತಂಡದ ಸೋಲಿಗೆ ಕಾರಣವಾಗಿದೆ. ಮುಂದಿನ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಧವನ್ರನ್ನು ತಂಡದಿಂದ ಕೈಬಿಟ್ಟು ರಾಹುಲ್ರಂತಹ ಸ್ಫೋಟಕ ಆಟಗಾರರಿಗೆ ಅವಕಾಶ ನೀಡಬೇಕು. ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಮುಂದುವರಿದರೆ ಪಂತ್ರನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಸಬೇಕು. ಪಂತ್ ಮ್ಯಾಚ್ ಫಿನಿಶಿಂಗ್ ಜವಾಬ್ದಾರಿ ನಿರ್ವಹಿಸಲಿದ್ದಾರೆ ಎಂದು ಶ್ರೀಕಾಂತ್ ತಿಳಿಸಿದ್ದಾರೆ.
ವಿಶ್ವಕಪ್ ದೃಷ್ಟಿಯಿಂದ ಭಾರತ ಆಯ್ಕೆ ಸಮಿತಿ ಆರಂಭಿಕರನ್ನು ಬದಲಾಯಿಸುವ ಬಗ್ಗೆ ಚಿಂತಿಸಬೇಕು. ತಂಡ ಬಲಿಷ್ಠವಾಗಿದೆ. ಆದ್ರೆ ಆರಂಭಿಕರ ಕೊರತೆ ಕಾಣುತ್ತಿದೆ. ರೋಹಿತ್ ಶರ್ಮಾಗೆ ಜೊತೆಯಾಗಿ ಓರ್ವ ಸ್ಫೋಟಕ ಜೊತೆಗಾರನ ಅವಶ್ಯಕತೆ ಇದೆ. ರಾಹುಲ್ರನ್ನು ಆರಂಭಿಕನಾಗಿ ಕಣಕ್ಕಿಳಿಸುವ ವಿಚಾರವನ್ನು ಈಗಿನಿಂದಲೇ ಆಲೋಚಿಸಿದರೆ ಒಳಿತು ಎಂದು ಶ್ರೀಕಾಂತ್ ಸಲಹೆ ನೀಡಿದ್ದಾರೆ.