ಮುಂಬೈ: ವಿವೋದಿಂದ ತೆರವಾಗಿದ್ದ ಐಪಿಎಲ್ ಟೈಟಲ್ ಪ್ರಾಯೋಕತ್ವದ ಬಿಡ್ನಲ್ಲಿ ಡ್ರೀಮ್ ಇಲೆವೆನ್ ಜಯ ಸಾಧಿಸಿದೆ. 2020ರ ಐಪಿಎಲ್ ಆವೃತ್ತಿಯ ಟೈಟಲ್ ಪ್ರಾಯೋಜಕತ್ವವನ್ನು ಡ್ರೀಮ್ ಇಲೆವೆನ್ 222 ಕೋಟಿ ರೂ. ನೀಡಿ ಖರೀದಿಸಿದೆ.
ಕಳೆದ 2 ವಾರಗಳಿಂದ ವಿವೋದಿಂದ ತೆರವಾಗಿದ್ದ ಟೈಟಲ್ ಪ್ರಾಯೋಜಕತ್ವಕ್ಕಾಗಿ ಅಮೇಜಾನ್, ಪತಂಜಲಿ, ಟಾಟಾ, ಜಿಯೋ, ಅನ್ ಅಕಾಡೆಮಿ ಹಾಗೂ ಬೈಜುಸ್ನಿಂತಹ ದೊಡ್ಡ ಸಂಸ್ಥೆಗಳು ಐಪಿಎಲ್ ಮೇಲೆ ಕಣ್ಣಿಟ್ಟಿದ್ದವು. ಆದರೆ ಡ್ರೀಮ್ ಇಲೆವೆನ್ ಅವೆಲ್ಲಕ್ಕೂ ಸಡ್ಡು ಹೊಡೆದು ಶ್ರೀಮಂತ ಕ್ರಿಕೆಟ್ ಲೀಗ್ ಪ್ರಾಯೋಜಕತ್ವ ಪಡೆದುಕೊಂಡಿದೆ.