ಕರ್ನಾಟಕ

karnataka

ETV Bharat / sports

ಸೆಲ್ಫಿ ತೆಗೆಸಿಕೊಂಡಿದ್ದೇ ಮುಳುವಾಯ್ತು: ದ್ವಿಶತಕ ಸಿಡಿಸಿದ್ದ ಬ್ಯಾಟ್ಸ್​ಮನ್ ಕೌಂಟಿ ತಂಡದಿಂದ ಔಟ್​! - Kent batsman Cox dropped for taking selfie with fans

ಅಭಿಮಾನಿಗಳ ಮನವಿಗೆ ಮಣಿದು ಸೆಲ್ಫಿಗೆ ಫೋಸ್​ ಕೊಡುವ ಮೂಲಕ ಕಾಕ್ಸ್​ ಬಯೋಸೆಕ್ಯೂರ್​ ಮತ್ತು ಸಾಮಾಜಿಕ ಅಂತರದ ನಿಯಮ ಮುರಿದಿರುವುದಕ್ಕೆ ಮುಂದಿನ ಪಂದ್ಯದಿಂದ ಹೊರಗಿಡಲಾಗಿದೆ.

ಜೋರ್ಡಾನ್​ ಕಾಕ್ಸ್
ಜೋರ್ಡಾನ್​ ಕಾಕ್ಸ್

By

Published : Aug 12, 2020, 3:04 PM IST

ಲಂಡನ್​: ಕೆಂಟ್​ ತಂಡದ ಬ್ಯಾಟ್ಸ್​ಮನ್​ ಜೋರ್ಡಾನ್​ ಕಾಕ್ಸ್​ ಬಾಬ್ಸ್​ ವಿಲ್ಸ್​ ಟ್ರೋಫಿಯಲ್ಲಿ ಮಿಡಲ್​ಎಸೆಕ್ಸ್ ವಿರುದ್ದ ಪಂದ್ಯ ನಡೆಯುತ್ತಿರುವಾಗ ಕೋವಿಡ್​ 19 ಪ್ರೋಟೋಕಾಲ್​ಗಳನ್ನು ಮೀರಿ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಕ್ಕೆ ಒಂದು ಪಂದ್ಯದಿಂದ ಹೊರಗಿಡಲಾಗಿದೆ.

ಅಭಿಮಾನಿಗಳ ಮನವಿಗೆ ಮಣಿದು ಸೆಲ್ಫಿಗೆ ಫೋಸ್​ ಕೊಡುವ ಮೂಲಕ ಕಾಕ್ಸ್​ ಬಯೋಸೆಕ್ಯೂರ್​ ಮತ್ತು ಸಾಮಾಜಿಕ ಅಂತರದ ನಿಯಮವನ್ನು ಮುರಿದಿರುವುದಕ್ಕೆ ಮುಂದಿನ ಪಂದ್ಯದಿಂದ ಹೊರಗಿಡಲಾಗಿದೆ.

" ಈ ಘಟನೆ ಸಂಭವಿಸಿರುವುದಕ್ಕೆ ನಾನು ಕ್ಷಮೆ ಕೋರುತ್ತೇನೆ. ನಾನು ಇದರಿಂದ ಎಲ್ಲ ಪರಿಣಾಮಗಳನ್ನು ಅರ್ಥಮಾಡಿಕೊಂಡಿದ್ದೇನೆ. ನನ್ನ ತಪ್ಪಿಗೆ ಎಲ್ಲರನ್ನೂ ಕ್ಷಮೆಯಾಚಿಸಲು ಬಯಸುತ್ತೇನೆ" ಎಂದು ಕಾಕ್ಸ್​ ಕೆಂಟ್​ ವೆಬ್​ಸೈಟ್​ಗೆ ತಿಳಿಸಿದ್ದಾರೆ.

"ನಾನು ಮುಂದಿನ ಪಂದ್ಯದಲ್ಲಿ ಆಡದಿರುವುದಕ್ಕೆ ನೋವುಂಟಾಗಿದೆ. ನನ್ನಿಂದ ಇಡೀ ತಂಡಕ್ಕೆ ನಿರಾಶೆಯುಂಟಾಗಿದೆ ಎಂದು ಭಾವಿಸುತ್ತೇನೆ" ಎಂದು ಅವರು ಹೇಳಿದ್ದಾರೆ.

ಇದೀಗ ಅವರು ಕ್ವಾರಂಟೈನ್​ನಲ್ಲಿದ್ದು, ಕೋವಿಡ್​ 19 ಪರೀಕ್ಷೆಯಲ್ಲಿ ನೆಗೆಟಿವ್​ ಫಲಿತಾಂಶ ಬಂದನಂತರವಷ್ಟೇ ತಂಡಕ್ಕೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ.

" ಇದೊಂದು ದುರದೃಷ್ಟಕರ ಸಂಗತಿಯಾಗಿದೆ. ಏಕೆಂದರೆ ಜೋರ್ಡಾನ್​ ಕಳೆದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರೂ ಬೆನ್ನಲ್ಲೇ ಅವರು ತಂಡದ ವೈದ್ಯಕೀಯ ಪ್ರೋಟೋಕಾಲ್​ಗಳನ್ನು ಉಲ್ಲಂಘಿಸಿದ್ದಾರೆ. ನಾವು ಈ ವೈದ್ಯಕೀಯ ಪ್ರೋಟೋಕಾಲ್​ಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ. ಜೋರ್ಡಾನ್​ ಕ್ವಾರಂಟೈನ್​ಗೆ ಒಳಗಾಗುವುದನ್ನು ಬಿಟ್ಟರೆ ಬೇರೆ ದಾರಿಯೇ ಇಲ್ಲ " ಎಂದು ಕೆಂಟ್​ ತಂಡದ ಡೈರೆಕ್ಟರ್​ ಪಾಲ್​ ಡಾಂಟನ್​ ತಿಳಿಸಿದ್ದಾರೆ.

ಸಸೆಕ್ಸ್​ ವಿರುದ್ಧದ ಕಳೆದ ಪಂದ್ಯದಲ್ಲಿ 19 ವರ್ಷದ ಜೋರ್ಡಾನ್​ ಔಟಾಗದೇ 238 ರನ್​ಗಳಿಸುವ ಮೂಲಕ ಹಲವಾರು ದಾಖಲೆಗಳೊಂದಿಗೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು 570 ಎಸೆತಗಳನ್ನು ಎದುರಿಸಿ 47 ಬೌಂಡರಿ ಹಾಗೂ 3 ಸಿಕ್ಸರ್​ಗಳನ್ನ ಸಿಡಿಸಿದ್ದರು.

ಸಸೆಕ್ಸ್​ ವಿರುದ್ಧ ಹೆಚ್ಚು ವೈಯಕ್ತಿಕ ರನ್​ ಸಿಡಿಸಿದ ಕೆಂಟ್​ ಬ್ಯಾಟ್ಸ್​ಮನ್​ ಹಾಗೂ ಕೌಂಟಿ ಇತಿಹಾಸದ ಮೊದಲ ಶತಕದಲ್ಲೇ ಅತಿ ಹೆಚ್ಚು ರನ್​ಗಳಿಸಿದ ದಾಖಲೆಯನ್ನು ಜೋರ್ಡಾನ್​ ಕಾಕ್ಸ್​ ನಿರ್ಮಿಸಿದ್ದರು.

ABOUT THE AUTHOR

...view details