ಮುಂಬೈ: ಭಾರತದ ಮಾಜಿ ನಾಯಕ ಎಂಎಸ್ ಧೋನಿಯನ್ನು ನಿವೃತ್ತಿ ಘೋಷಿಸುವಂತೆ ಒತ್ತಡ ಹೇರಬಾರದು ಎಂದು ಇಂಗ್ಲೆಂಡ್ ಮಾಜಿ ನಾಯಕನಾಸಿರ್ ಹುಸೈನ್ ತಿಳಿಸಿದ್ದಾರೆ.
ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಗೌರವಯುತ ಧ್ವನಿಯಾಗಿರುವ ಹುಸೈನ್, 39 ವರ್ಷದ ಧೋನಿ ಇನ್ನೂ ಭಾರತದ ಪರ ಕ್ರಿಕೆಟ್ ಆಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒಮ್ಮೆ ಧೋನಿ ನಿವೃತ್ತಿ ಹೊಂದಿದರೆ, ಅವರನ್ನು ಮತ್ತೆ ಕರೆಸಿಕೊಳ್ಳುವುದಕ್ಕಾಗುವುದಿಲ್ಲ. ವಿಶ್ವದಾದ್ಯಂತ ಪ್ರಸಿದ್ದ ಪಡೆದ ಕೆಲವು ಲೆಜೆಂಡ್ಗಳಿಗೆ ಹೆಚ್ಚು ಅವಕಾಶ ನೀಡಬೇಕು. ಏಕೆಂದರೆ ಇವರೆಲ್ಲ ಪೀಳಿಗೆಗೊಬ್ಬ ಆಗಟಾರರಾಗಿದ್ದಾರೆ. ಆದ್ದರಿಂದ ಅವರನ್ನುಈಗಲೇ ನಿವೃತ್ತಿ ಘೋಷಿಸಿ ಎಂದು ಒತ್ತಡ ಏರಬಾರದು. ಕೇವಲ ಧೋನಿ ಮಾತ್ರ ಅವರು ಯಾವಾಗ ನಿವೃತ್ತಿ ಘೋಷಿಸಬೇಕು ಎಂಬುದನ್ನು ತಿಳಿದಿದ್ದಾರೆ ಎಂದು ಹುಸೈನ್ ಹೇಳಿದ್ದಾರೆ.
ಎಂಎಸ್ ಧೋನಿ 2019 ವಿಶ್ವಕಪ್ ಸೆಮಿಫೈನಲ್ ನಲ್ಲಿ ಕೊನೆಯ ಬಾರಿಗೆ ಸ್ಪರ್ಧಾತ್ಮಕ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿದ್ದರು. ಅದನ್ನು ಬಿಟ್ಟರೆ ಅವರು ಇನ್ನು ಯಾವುದೆ ರೀತಿಯ ಕ್ರಿಕೆಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕಪಿಲ್ ದೇವ್, ಸುನಿಲ್ ಗವಾಸ್ಕರ್ ಅಂತಹ ಮಹಾನ್ ದಿಗ್ಗಜರು ಕೂಡ ಧೋನಿ ನಿವೃತ್ತಿ ಅಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಹುಸೈನ್ ಮಾತ್ರ ಭಾರತ ತಂಡಕ್ಕೆ ಮರಳಲು ಧೋನಿ ಅವರಲ್ಲಿ ಈಗಲೂ ಸಾಮರ್ಥ್ಯವಿದೆ. ಈ ವಿಚಾರ ಮಂಡಳಿಯಲ್ಲಿರುವ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಹೌದು, ಕಳೆದ ವಿಶ್ವಕಪ್ನಲ್ಲಿ ಧೋನಿ ರನ್ ಚೇಸ್ ಮಾಡುವಲ್ಲಿ ಎಡವಿರಬಹುದು. ಆದರೆ, ಅವರು ಈಗಲೂ ಅದ್ಭುತ ಪ್ರತಿಭಾವಂತ ಆಟಗಾರ ಆಗಿದ್ದಾರೆ. ಧೋನಿ ನಿವೃತ್ತಿಯ ವಿಷಯದಲ್ಲಿ ಈಗ ಎಲ್ಲರೂ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಹುಸೈನ್ ಉಲ್ಲೇಖಿಸಿದ್ದಾರೆ.