ಜೊಹಾನ್ ಬರ್ಗ್: ದಕ್ಷಿಣ ಅಫ್ರಿಕಾ ಸೀಮಿತ ಓವರ್ಗಳ ನಾಯ ಕ್ವಿಂಟನ್ ಡಿಕಾಕ್ ಟೆಸ್ಟ್ ನಾಯಕತ್ವ ಹೊರೆಯಾಗುವುದರಿಂದ ಆ ಜವಾಬ್ದಾರಿಯನ್ನು ಹೊರಲು ತಾವು ಸಿದ್ಧರಿಲ್ಲ ಎಂದು ತಿಳಿಸಿದ್ದಾರೆ.
27 ವರ್ಷದ ಕ್ರಿಕೆಟಿಗ ಕಳೆದ ಜನವರಿಯಲ್ಲಿ ಫಾಪ್ ಡು ಪ್ಲೆಸಿಸ್ರಿಂದ ತೆರವಾದ ಏಕದಿನ ಕ್ರಿಕೆಟ್ ನಾಯಕತ್ವವನ್ನು ಸ್ವೀಕರಿಸಿದ್ದರು. ಆದರೆ ಹರಿಣ ಪಡೆಯ ಟೆಸ್ಟ್ ನಾಯಕತ್ವದ ಜವಾಬ್ದಾರಿಯನ್ನು ಹೊರಲು ನಿರಾಕರಿಸಿದ್ದಾರೆ.
ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಈ ವಿಚಾರವಾಗಿ ಕೋಚ್ ಮಾರ್ಕ್ ಬೌಷರ್ ಜೊತೆ ಚರ್ಚೆ ನಡೆಸಿರುವುದಾಗಿ ತಿಳಿಸಿದ್ದಾರೆ.
"ನನ್ನ ಮತ್ತು ಬೌಚರ್ ನಡುವಿನ ಅನೌಪಚಾರಿಕ ಚರ್ಚೆಯಲ್ಲಿ ಟೆಸ್ಟ್ ನಾಯಕತ್ವ ನನಗೆ ತುಂಬಾ ಹೊರೆಯಾಗಲಿ ಎಂದು ನನ್ನಲ್ಲಿರುವ ಭಾವನೆಯನ್ನು ಅವರ ಮುಂದೆ ವ್ಯಕ್ತಪಡಿಸಿದ್ದೇನೆ. ವಾಸ್ತವವೆಂದರೆ ನನಗೆ ಟೆಸ್ಟ್ ನಾಯಕತ್ವ ತುಂಬಾ ಹೆಚ್ಚು ಎನಿಸಲಿದೆ. ಅದು ನನಗೆ ತಿಳಿದಿದೆ. ಅದನ್ನು ನಾನು ಅರಿತ ಮೇಲೆ ಎಲ್ಲಾ ಒತ್ತಡಗಳು ನನಗೆ ಅಗತ್ಯವಿಲ್ಲ" ಎಂಬ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ.
ಟೆಸ್ಟ್ ನಾಯಕತ್ವವನ್ನು ಒಂದು ಮೈಲಿ ದೂರದಲ್ಲಿ ನಿಂತು ನೋಡಬಲ್ಲೆ ಹೊರೆತು ಅದನ್ನು ನನ್ನ ಹೆಗಲ ಮೇಲೆ ಹೊರಲು ಸಾಧ್ಯವಿಲ್ಲ. ಟೆಸ್ಟ್ ಕ್ರಿಕೆಟ್ನಲ್ಲಿ ಟಾಪ್ ಆರ್ಡರ್ನಲ್ಲಿ ಆಡಲು ಬಯಸಿದ್ದೇನೆ. ಆದ್ದರಿಂದ ಆ ಹೆಚ್ಚುವರಿ ಒತ್ತಡದ ಅಗತ್ಯವಿಲ್ಲ ಎಂದಿದ್ದಾರೆ.
ಡಿಕಾಕ್ ದಕ್ಷಿಣ ಆಫ್ರಿಕಾ ತಂಡದ ಪರ 121 ಏಕದಿನ ಪಂದ್ಯ, 47 ಟೆಸ್ಟ್ ಹಾಗೂ 44 ಟಿ-20 ಪಂದ್ಯಗಳನ್ನಾಡಿದ್ದಾರೆ. ಅವರು ಕ್ರಮವಾಗಿ 5135, 2934 ಹಾಗೂ 1226 ರನ್ಗಳಿಸಿದ್ದಾರೆ.