ಕರ್ನಾಟಕ

karnataka

ETV Bharat / sports

ಭಾರತ ಉತ್ತಮ ಬೌಲಿಂಗ್​ ದಾಳಿ ಹೊಂದಿದೆ.. ಆದರೂ ಎಚ್ಚರಿಕೆಯಿಂದ ಆಡಬೇಕು: ಕಪಿಲ್​ ದೇವ್​ - ನವದೀಪ್ ಸೈನಿ

ಒಂದು ಹಂತದಲ್ಲಿ ನಾವು ಉತ್ತಮ ವೇಗದ ಬೌಲಿಂಗ್ ದಾಳಿಯನ್ನು ಹೊಂದಿರಬಹುದು, ಆದರೆ ಅವರು (ಆಸ್ಟ್ರೇಲಿಯನ್ನರು) ನಮ್ಮ ವೇಗದ ಬೌಲರ್‌ಗಳಿಗಿಂತ ಅಲ್ಲಿನ ಪರಿಸ್ಥಿತಿಗಳನ್ನು ಚೆನ್ನಾಗಿ ತಿಳಿದಿದ್ದಾರೆ

ಕಪಿಲ್​ ದೇವ್​
ಕಪಿಲ್​ ದೇವ್​

By

Published : Dec 15, 2020, 10:38 PM IST

ಕೋಲ್ಕತ್ತಾ: ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಭಾರತ ವೇಗದ ದಾಳಿಯನ್ನ ಸಮರ್ಥವಾಗಿ ಬಳಕೆ ಮಾಡಿಕೊಳ್ಳಬೇಕು ಹಾಗೂ ಬೌನ್ಸಿ ವಿಕೆಟ್​ಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು 83ರ ವಿಶ್ವಕಪ್​ ಲೆಜೆಂಡ್​ ಕಪಿಲ್​ದೇವ್​ ಸಲಹೆ ನೀಡಿದ್ದಾರೆ.

ಅನುಭವಿ ಇಶಾಂತ್​ ಶರ್ಮಾ ಅನುಪಸ್ಥಿತಿಯ ನಡುವೆ ಮಾರಕ ವೇಗದ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುವ ಜಸ್ಪ್ರೀತ್​ ಬುಮ್ರಾ ಹಾಗೂ ಮೊಹಮ್ಮದ್​ ಶಮಿ ಬಲ ತಂಡಕ್ಕೆ ಇದೆ. ಜತೆಗೆ ಉಮೇಶ್​ ಯಾದವ್​, ಮೊಹಮ್ಮದ್ ಸಿರಾಜ್ ಮತ್ತು ನವದೀಪ್ ಸೈನಿ ಅವರ ನೆರವು ತಂಡಕ್ಕೆ ಸಿಗಲಿದೆ ಎಂದು ಟೀಂ ಇಂಡಿಯಾಕ್ಕೆ ಹುರುಪು ತುಂಬಿದ್ದಾರೆ. ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಸಮರ್ಥವಾಗಿ ಬೌಲಿಂಗ್ ಮಾಡುವ ಅನುಭವ ಭಾರತೀಯರಿಗೆ ಇನ್ನೂ ಅಷ್ಟರ ಮಟ್ಟಿಗೆ ಸಿದ್ದಿಸಿಲ್ಲ ಎಂದು ಇದೇ ವೇಳೆ ಅವರು ಅಭಿಪ್ರಾಯವನ್ನೂ ಪಟ್ಟರು.

ಭಾರತೀಯ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ ವರ್ಚುಯಲ್​ ಕಾರ್ಯಕ್ರಮದಲ್ಲಿ ಮಾತನಾಡಿದ ಕಪಿಲ್​ ದೇವ್​, ನಮ್ಮ ಆಟಗಾರರು ಆಸ್ಟ್ರೇಲಿಯಾದ ಪಿಚ್​ಗಳಲ್ಲಿ ಪೂರ್ಣ ಸಾಮರ್ಥ್ಯದ ಬೌಲಿಂಗ್​ ಮಾಡಲು ಸಫಲರಾಗುತ್ತಿಲ್ಲ. ಆದರೆ, ಕೆಲವೊಮ್ಮೆ ಅವರ ಬೌನ್ಸ್ ಮಾಡುತ್ತ ಮತ್ತು ಬೌಲಿಂಗ್ ಮಾಡಲು ಪ್ರಾರಂಭಿಸಿದಾಗ ಅವರು ದೂರ ಹೋಗಬಹುದು ಎಂದು ಅಭಿಪ್ರಾಯಪಟ್ಟರು. " ಒಂದು ಹಂತದಲ್ಲಿ ನಾವು ಉತ್ತಮ ವೇಗದ ಬೌಲಿಂಗ್ ದಾಳಿಯನ್ನು ಹೊಂದಿರಬಹುದು, ಆದರೆ ಅವರು (ಆಸ್ಟ್ರೇಲಿಯನ್ನರು) ನಮ್ಮ ವೇಗದ ಬೌಲರ್‌ಗಳಿಗಿಂತ ಅಲ್ಲಿನ ಪರಿಸ್ಥಿತಿಗಳನ್ನು ಚೆನ್ನಾಗಿ ತಿಳಿದಿದ್ದಾರೆ" ಎಂದರು.

ABOUT THE AUTHOR

...view details