ಕರ್ನಾಟಕ

karnataka

ETV Bharat / sports

ಧೋನಿಯನ್ನ ಕೈಬಿಟ್ಟಿದ್ದು ಸರಿಯಾದ ನಿರ್ಧಾರ: ಗಂಗೂಲಿ ಕೊಟ್ಟ ಕಾರಣ ಏನು ಗೊತ್ತಾ? - ಗಂಗೂಲಿ

ಆಯ್ಕೆ ಸಮಿತಿ ಧೋನಿ ಅವರನ್ನ ಕೈ ಬಿಟ್ಟು ರಿಷಭ್ ಪಂತ್​ಗೆ ಸ್ಥಾನ ನೀಡಿದ್ದು ಉತ್ತಮ ನಿರ್ಧಾರ ಎಂದು ಟೀಂ ಇಂಡಿಯಾ ಮಾಜಿ ನಾಯಕ ಸೌರವ್​ ಗಂಗೂಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಂ.ಎಸ್.ಧೋನಿ, ಗಂಗೂಲಿ

By

Published : Sep 1, 2019, 10:04 AM IST

ನವದೆಹಲಿ:ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಮಾಜಿ ನಾಯಕ ಎಂ.ಎಸ್​.ಧೋನಿಯನ್ನ ಅಯ್ಕೆ ಸಮಿತಿ ಕೈಬಿಟ್ಟಿದ್ದು, ಈ ನಿರ್ಧಾರವನ್ನ ಸೌರವ್​ ಗಂಗೂಲಿ ಸ್ವಾಗತಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಗೆ ಧೋನಿ ಆಯ್ಕೆಯಾಗುತ್ತಾರೆ ಎಂದು ನಾನು ಊಹಿಸಿರಲಿಲ್ಲ. ಅದರಂತೆ ಆಯ್ಕೆ ಸಮಿತಿ ಧೋನಿ ಅವರನ್ನ ಕೈಬಿಟ್ಟು ರಿಷಭ್ ಪಂತ್​ಗೆ ಸ್ಥಾನ ನೀಡಿದ್ದು ಉತ್ತಮ ನಿರ್ಧಾರ ಎಂದಿದ್ದಾರೆ.

ಎಂ.ಎಸ್.ಧೋನಿ, ರಿಷಭ್ ಪಂತ್

ಯುವ ಆಟಗಾರ ರಿಷಭ್ ಪಂತ್​ಗೆ ಹೆಚ್ಚು ಹೆಚ್ಚು ಅವಕಾಶಗಳು ಬೇಕಾಗಿದೆ. ಧೋನಿ ಕೂಡ ಯುವ ಆಟಗಾರನಾಗಿದ್ದಾಗ ಹೆಚ್ಚು ಅವಕಾಶಗಳನ್ನ ನೀಡಲಾಗಿತ್ತು. ಆದ್ದರಿಂದ ಆಯ್ಕೆ ಸಮಿತಿಯ ನಿರ್ಧಾರವನ್ನ ನಾನು ಸ್ವಾಗತಿಸುತ್ತೇನೆ. ರಿಷಭ್ ಪಂತ್​ ಅವರನ್ನ ಧೋನಿಯೊಂದಿಗೆ ಹೋಲಿಕೆ ಮಾಡೋದು ಸರಿಯಲ್ಲ. ಪಂತ್​, ಧೋನಿಯಲ್ಲ, ಧೋನಿಯಂತಾಗಲು ಸಾಧ್ಯವಿಲ್ಲ ಎಂದಿದ್ದಾರೆ.

ಅಲ್ಲದೆ ಈ ವಿಚಾರವಾಗಿ ಧೋನಿ, ಆಯ್ಕೆ ಸಮಿತಿ ಮತ್ತು ಟೀಂ ಇಂಡಿಯಾ ಮ್ಯಾನೇಜ್​ಮೆಂಟ್​ ನಡುವೆ ಏನು ಮಾತುಕತೆ ನಡೆದಿದೆಯೋ ಗೊತ್ತಿಲ್ಲ. ನಾನು ಅದರಿಂದ ಸ್ವಲ್ಪ ದೂರದಲ್ಲಿದ್ದೇನೆ ಎಂದಿದ್ದಾರೆ.

ABOUT THE AUTHOR

...view details