ರಾಂಚಿ :ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 1800 ರೂಪಾಯಿ ಬಾಕಿ ಮೊತ್ತವನ್ನು ಜಾರ್ಖಂಡ್ ಕ್ರಿಕೆಟ್ ಅಸೋಸಿಯೇಷನ್ಗೆ ನೀಡಬೇಕೆಂಬ ವಿಷಯ ದೊಡ್ಡ ವಿವಾದಕ್ಕೆ ಸಿಲುಕುತ್ತಿದೆ.
ಜಾರ್ಖಂಡ್ ರಾಜ್ಯ ಕ್ರಿಕೆಟ್ ಬೋರ್ಡ್‌ಗೆ ಧೋನಿ ₹1,800 ನೀಡಬೇಕೆಂದು ವರದಿ ಬಹಿರಂಗಗೊಳ್ಳುತ್ತಿದ್ದಂತೆ ಹಲವಾರು ಶಾಲಾ ವಿಧ್ಯಾರ್ಥಿಗಳು ಹಾಗೂ ಅಭಿಮಾನಿಗಳು ಆ ಹಣವನ್ನು ಡ್ರಾಫ್ಟ್ ಮೂಲಕ ಜೆಎಸಿಎಗೆ ತಲುಪಿಸಲು ಪ್ರಯತ್ನಿಸಿದ್ದು, ವಿವಾದದ ಬೆಂಕಿಗೆ ತುಪ್ಪ ಸುರಿದಂತಾಗಿದೆ. ನಂತರ ಮಾಜಿ ಕ್ರಿಕೆಟಿಗ ಶೇಶ್ ನಾಥ್ ಪಾಠಕ್ ನೇತೃತ್ವದಲ್ಲಿ ಜೆಎಸಿಎ ಕಚೇರಿಗೆ ತೆರಳಿ ಡ್ರಾಫ್ಟ್ ಮೂಲಕ ಹಣವನ್ನು ಸಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ, ಅದನ್ನು ಅಧಿಕಾರಿಗಳು ಸ್ವೀಕರಿಸಿಲ್ಲ ಎಂದು ತಿಳಿದು ಬಂದಿದೆ.
ಈ ಕುರಿತು ಮಾತನಾಡಿರುವ ಜೆಎಸಿಎ ಕಾರ್ಯದರ್ಶಿ ಸಂಜಯ್ ಸಹಯ್, ನಾವು ಆ ಕರಡು(ಡ್ರಾಫ್ಟ್) ಸ್ವೀಕರಿಸಿಲ್ಲ ಎಂದು ದೃಢಪಡಿಸಿದ್ದಾರೆ. ಆದರೆ, ಧೋನಿ ಬಾಕಿ ಹಣವನ್ನು ಪಾವತಿಸಿಬೇಕೆಂದು ವಿವಾದಕ್ಕಾಗಿ ನಾವು ಹೇಳಲಿಲ್ಲ. ಬಾಕಿ ಹಣ ಯಾವುದೆಂದು ಧೋನಿಗೆ ಮಾತ್ರ ತಿಳಿಸಿದ್ದೇವೆ. ಆದರೆ, ಅಸ್ಪಷ್ಟತೆಯಿಂದ ಊಹಾಪೋಹಗಳಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.