ಕರ್ನಾಟಕ

karnataka

ETV Bharat / sports

ವಿಶ್ವದಾಖಲೆ ಬರೆದ ಧೋನಿ: ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್​ ಕೀಪಿಂಗ್​ ಕೀರ್ತಿ! - ಏಕದಿನ

ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ಏಕದಿನ ಕ್ರಿಕೆಟ್​​ನಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ.

ಎಂಎಸ್​ ಧೋನಿ

By

Published : Jul 9, 2019, 8:12 PM IST

Updated : Jul 9, 2019, 8:46 PM IST

ಮ್ಯಾಂಚೆಸ್ಟರ್​​(ಇಂಗ್ಲೆಂಡ್):ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ವಿಶ್ವಕಪ್​​ನಲ್ಲಿ ನ್ಯೂಜಿಲ್ಯಾಂಡ್​ ತಂಡದ ವಿರುದ್ಧ ಸೆಮಿಫೈನಲ್​ ಪಂದ್ಯ ಆಡುವ ಮೂಲಕ ನೂತನ ದಾಖಲೆ ನಿರ್ಮಿಸಿದ್ದಾರೆ.

ಬರೋಬ್ಬರಿ 350 ಏಕದಿನ ಕ್ರಿಕೆಟ್​ ಪಂದ್ಯಗಳನ್ನಾಡಿರುವ ಧೋನಿ ಇಷ್ಟೊಂದು ಪಂದ್ಯಗಳಲ್ಲಿ ವಿಕೆಟ್​ ಕೀಪರ್​ ಆಗಿ ಕಾರ್ಯನಿರ್ವಹಿಸಿದ್ದು, ಈ ಸಾಧನೆಗೈದ ಮೊದಲ ಪ್ಲೇಯರ್​ ಎಂಬ ಕೀರ್ತಿಗೆ ಭಾಜನರಾದರು.

ಇದುವರೆಗೆ ಭಾರತದ ಪರ 347 ಮತ್ತು ಏಷ್ಯಾ ಇಲೆವೆನ್​ ಪರವಾಗಿ 3 ಪಂದ್ಯ ಸೇರಿ ಒಟ್ಟು 350 ಏಕದಿನ ಪಂದ್ಯಗಳನ್ನು ಅವರು ಆಡಿದ್ದಾರೆ. ಇದರಲ್ಲಿ 200 ಪಂದ್ಯಗಳಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್​ ಆಗಿ ತಂಡ ಮುನ್ನಡೆಸಿರುವ ಶ್ರೇಯ ಸಹ ಇವರ ಪಾಲಾಗಿದೆ.

ವಿಶೇಷವೆಂದರೆ, ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕಾರ​ ಒಟ್ಟು 360 ಪಂದ್ಯಗಳಲ್ಲಿ ವಿಕೇಟ್‌ಕೀಪರ್​ ಆಗಿ ಮೈದಾನಕ್ಕಿಳಿದಿದ್ದರೂ, 44 ಪಂದ್ಯಗಳಲ್ಲಿ ಅವರನ್ನು ಬ್ಯಾಟ್ಸಮನ್​ ಎಂದು ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಆದರೆ ಧೋನಿ ಎಲ್ಲ ಪಂದ್ಯಗಳಲ್ಲೂ ಕೀಪರ್​ ಆಗಿ ಕಾರ್ಯನಿರ್ವಹಿಸಿರುವುದು ವಿಶೇಷವಾಗಿದೆ.

ಈ ಪಂದ್ಯದೊಂದಿಗೆ 350 ಪಂದ್ಯಗಳನ್ನಾಡಿರುವ ಪಟ್ಟಿಯಲ್ಲಿ ಧೋನಿ 10ನೇ ಆಟಗಾರನಾಗಿದ್ದು​, ಈಗಾಗಲೇ ಸಚಿನ್​ ತೆಂಡೂಲ್ಕರ್​ 463 ಏಕದಿನ ಪಂದ್ಯ, ಮಹೇಲ ಜಯವರ್ಧನೆ (448), ಸನತ್​ ಜಯಸೂರ್ಯ (445), ಕುಮಾರ ಸಂಗಕ್ಕಾರ (404), ಪಾಕಿಸ್ತಾನದ ಶಾಹಿದ್​ ಆಫ್ರಿದಿ (398), ಇನ್ಜಮಾಮ್​ ಉಲ್​ ಹಕ್​ (378), ರಿಕಿ ಪಾಂಟಿಂಗ್​ (375), ವಾಸಿಂ ಅಕ್ರಂ (356) ಮತ್ತು ಶ್ರೀಲಂಕಾದ ಮುತ್ತಯ್ಯ ಮುರಳೀಧರನ್​ (350 ಪಂದ್ಯಗಳು) ಇದ್ದಾರೆ.

Last Updated : Jul 9, 2019, 8:46 PM IST

ABOUT THE AUTHOR

...view details