ಹೈದರಾಬಾದ್: ಟೀಂ ಇಂಡಿಯಾ ಹಿರಿಯ ಆಟಗಾರ ಎಂ.ಎಸ್.ಧೋನಿ ನಿವೃತ್ತಿ ಬಗ್ಗೆ ಆಗಾಗ ಸುದ್ದಿ ಕೇಳಿ ಬರುತ್ತಲೇ ಇದ್ದರೂ ಮಾಹಿ ಮಾತ್ರ ಮೌನ ವಹಿಸಿದ್ದಾರೆ.
ಭಾರತ ಮಾತ್ರವಲ್ಲದೆ ಇತರೇ ದೇಶದ ಮಾಜಿ ಆಟಗಾರರು ಧೋನಿ ನಿವೃತ್ತಿ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಸದ್ಯ ಟೀಂ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಸರದಿ.
ಧೋನಿ ನಿವೃತ್ತಿಯನ್ನ ಕೊಹ್ಲಿ, ಆಯ್ಕೆಗಾರರೇ ತೀರ್ಮಾನಿಸಬೇಕು.. ಗಂಗೂಲಿ ಹೀಗೆ ಹೇಳಿದ್ದೇಕೆ?
ಗುರುವಾರ ಸಂದರ್ಶನವೊಂದರಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್, ಧೋನಿ ನಿವೃತ್ತಿಯ ಸಮಯ ಬಂದಿದೆ. ಮಾಹಿ ಮೇಲೆ ಸಂಪೂರ್ಣ ಗೌರವ ಹೊಂದಿದ್ದು, ಟೀಂ ಇಂಡಿಯಾ ಸದ್ಯ ಧೋನಿಯ ಉತ್ತರಾಧಿಕಾರಿಯನ್ನು ತಯಾರು ಮಾಡಬೇಕು. ಯಾವುದೇ ಒತ್ತಡವಿಲ್ಲದೆ ಧೋನಿ ನಿವೃತ್ತಿಗೆ ಜಾರಲಿದ್ದಾರೆ ಎಂದಿದ್ದಾರೆ.
ಧೋನಿ ಹಲವು ಬಾರಿ ಎಲ್ಲರ ನಿರೀಕ್ಷೆ ಹುಸಿ ಮಾಡಿ ಅದ್ಭುತ ಪ್ರದರ್ಶನ ನೀಡಿದ್ದರು. ಧೋನಿ ಯುವ ಆಟಗಾರರನ್ನು ಬೆಳೆಸುವ ರೀತಿ ನಿಜಕ್ಕೂ ಮಾದರಿ. ಎಲ್ಲಿಯ ತನಕ ಧೋನಿ ಮೈದಾನಕ್ಕಿಳಿಯುತ್ತಾರೋ ಅಲ್ಲಿಯ ತನಕ ಅವರೊಬ್ಬ ಅತ್ಯುತ್ತಮ ಆಟಗಾರರಾಗಿಯೇ ಇರಲಿದ್ದಾರೆ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಧೋನಿ ನಿವೃತ್ತಿ ವರದಿಗೆ ಕೊಹ್ಲಿ ಗರಂ; ಸುದ್ದಿಗೋಷ್ಠಿಯಲ್ಲಿ ವಿರಾಟ್ ಮಾತು
ವಿಶ್ವಕಪ್ ಟೂರ್ನಿಯ ಬಳಿಕ ಧೋನಿ ಟೀಂ ಇಂಡಿಯಾ ಜೆರ್ಸಿ ಧರಿಸಿಲ್ಲ. ಸೇನೆಯ ತರಬೇತಿ ಕಾರಣ ನೀಡಿ ವಿಂಡೀಸ್ ಪ್ರವಾಸದಿಂದ ತಾವೇ ಹೊರಗುಳಿದಿದ್ದರು. ಪ್ರಸ್ತುತ ಆರಂಭವಾಗಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆ ಸಮಿತಿ ಧೋನಿಯನ್ನು ಪರಿಗಣಿಸಿಲ್ಲ.