ಮುಂಬೈ: ಭಾರತ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ನಾಯಕರಾಗಿರುವ ಎಂಎಸ್ ಧೋನಿ ನಾಯಕತ್ವ ವಹಿಸಿಕೊಂಡ ವೇಳೆ ದಾದಾ ನೀಡಿದಷ್ಟು ಉತ್ತಮ ಗುಣಮಟ್ಟದ ಆಟಗಾರರನ್ನು ಕೊಹ್ಲಿ ನಾಯಕರಾದಾಗ ಧೋನಿ ನೀಡುವಲ್ಲಿ ವಿಫಲರಾದರು ಎಂದು ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ.
ಗಂಗೂಲಿ ನಾಯಕನಾದ ಮೇಲೆ ಭಾರತದ ಕ್ರಿಕೆಟ್ ಆಯಾಮವೇ ಬದಲಾಯಿತು. ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ಕೊಟ್ಟರು. ಸೆಹ್ವಾಗ್, ಯುವರಾಜ್, ಜಹೀರ್ ಖಾನ್, ಹರ್ಭಜನ್ಸಿಂಗ್ ಅವರಂತಹ ಶ್ರೇಷ್ಠ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿದರು. ನಂತರ ಧೋನಿ ನಾಯಕನಾದಾಗ ಅವರಿಗೆ ಬಲಿಷ್ಠ ತಂಡ ಇರುವಂತೆ ಮಾಡಿಕೊಟ್ಟಿದ್ದರು.
ಆದರೆ, ಧೋನಿ ನಾಯಕನಾಗಿ ಯಶಸ್ವಿಯಾಗಲು ದಾದಾ ನೀಡಿದ ಆಟಗಾರರು ಕಾರಣವಾಗಿದ್ದರು. ಆದರೆ, ಧೋನಿ ನಿವೃತ್ತಿಯಾದಾದ ಕೊಹ್ಲಿಗೆ ಅಂತಹ ಉತ್ತಮ ಮೌಲ್ಯಯುತ ಆಟಗಾರರನ್ನು ನೀಡುವಲ್ಲಿ ಧೋನಿ ವಿಫಲರಾದರು. ಕೇವಲ ರೋಹಿತ್, ಬುಮ್ರಾ, ಹಾಗೂ ಕೊಹ್ಲಿ ಮಾತ್ರ ಉತ್ತಮ ಆಟಗಾರರನ್ನು ಬಿಟ್ಟರೆ ತಂಡದಲ್ಲಿ ಗುಣಮಟ್ಟವುಳ್ಳ ಆಟಗಾರರ ಕೊರತೆ ಕಾಣುತ್ತದೆ ಎಂದು ಗಂಭೀರ್ ಹೇಳಿದ್ದಾರೆ.
ಆದರೆ, ಗಂಭೀರ್ ಅಭಿಪ್ರಾಯವನ್ನು ಕ್ರಿಕೆಟ್ ಅಭಿಮಾನಿಗಳು ಅಲ್ಲಗೆಳೆದಿದ್ದು, ಗಂಭೀರ್, ಪೂಜಾರ, ಶಮಿ, ಭುವನೇಶ್ವರ್, ಧವನ್, ಆಶ್ವಿನ್ , ಕೆ.ಎಲ್. ರಾಹುಲ್, ಜಡೇಜಾ, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್ ಯಾವ ಮಟ್ಟದ ಆಟಗಾರರು ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಧೋನಿ ಮೇಲಿನ ಹೊಟ್ಟೆಕಿಚ್ಚಿಗೆ ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.