ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಟಗಾರರ ವಾರ್ಷಿಕ ಒಪ್ಪಂದದ ಪಟ್ಟಿ ಬಿಡುಗಡೆ ಮಾಡಿದ್ದು, ಟೀಂ ಇಂಡಿಯಾ ನಾಯಕ ವಿರಾಟ್, ರೋಹಿತ್ ಶರ್ಮಾ ಮತ್ತು ಬುಮ್ರಾ ಅತಿಹೆಚ್ಚು ಸಂಭಾವನೆ ಪಡೆಯುವ ಆಟಗಾರರಾಗಿದ್ದಾರೆ.
2019 ಅಕ್ಟೋಬರ್ ನಿಂದ 2020ರ ಸೆಪ್ಟೆಂಬರ್ ವರೆಗೆ ವಾರ್ಷಿಕ ಆಟಗಾರರ ಒಪ್ಪಂದದ ಪಟ್ಟಿ ಬಿಡುಗಡೆ ಮಾಡಿದ್ದು, ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನ ಒಪ್ಪಂದದಿಂದ ಕೈಬಿಡಲಾಗಿದೆ.
A+, A, B ಮತ್ತು C ಗ್ರೇಡ್ ಎಂದು ಆಟಗಾರರನ್ನ ಪಟ್ಟಿ ಮಾಡಲಾಗಿದೆ, A+ ಪಟ್ಟಿ ಯಲ್ಲಿರುವ ಆಟಗಾರರು ವಾರ್ಷಿಕ 7 ಕೋಟಿ ಹಣ ಪಡೆದ್ರೆ, A ಗ್ರೇಡ್ ಆಟಗಾರರು 5 ಕೋಟಿ ಪಡೆಯಲಿದ್ದಾರೆ. B ಗ್ರೇಡ್ ಆಟಗಾರರು 3 ಮತ್ತು C ಗ್ರೇಡ್ ಆಟಗಾರರು 1 ಕೋಟಿ ರೂಪಾಯಿ ಹಣ ಪಡೆಯಲಿದ್ದಾರೆ.
A+ ಪಟ್ಟಿಯಲ್ಲಿರುವ ಆಟಗಾರರು(7 ಕೋಟಿ ಸಂಭಾವನೆ) :
- ವಿರಾಟ್ ಕೊಹ್ಲಿ
- ರೋಹಿತ್ ಶರ್ಮಾ
- ಜಸ್ಪ್ರಿತ್ ಬುಮ್ರಾ