ಹೈದರಾಬಾದ್:ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವ್ಯಾಪಾರಕ್ಕೆ ಹಕ್ಕಿ ಜ್ವರ ಸೋಂಕು ತಗುಲಿದೆ. ಕಡಕ್ ನಾಥ್ ಕೋಳಿ ವ್ಯಾಪಾರ ಆರಂಭಿಸಬೇಕೆಂದಿದ್ದ ಧೋನಿಗೆ ಹಕ್ಕಿ ಜ್ವರ ಅಡ್ಡಿಪಡಿಸಿದೆ.
ಧೋನಿ ವ್ಯಾಪಾರಕ್ಕೂ ಸೋಂಕಿದ ಹಕ್ಕಿ ಜ್ವರ.. ಆರ್ಡರ್ ಮಾಡಿದ 2000 ‘ಕಡಕ್ ನಾಥ್’ ಕೋಳಿಗಳ ಸಾವು - ಹಕ್ಕಿ ಜ್ವರ ಸುದ್ದಿ
ಕಡಕ್ನಾಥ್ ಕೋಳಿಗಳ ವ್ಯಾಪಾರವನ್ನು ಮಾಡಬೇಕೆಂದುಕೊಂಡಿದ್ದ ಮಹೇಂದ್ರ ಸಿಂಗ್ ಧೋನಿಗೆ ಹಕ್ಕಿಜ್ವರ ಶಾಕ್ ನೀಡಿದೆ.
ಧೋನಿ ವ್ಯಾಪರಕ್ಕೂ ಸೋಂಕಿದ ಹಕ್ಕಿ ಜ್ವರ
ಹೌದು, ಅತ್ಯಧಿಕ ಔಷಧ ಗುಣವುಳ್ಳ ಈ ಕೋಳಿಗಳ ಫಾರ್ಮ್ನ್ನು ಸ್ವಗ್ರಾಮದಲ್ಲಿ ತೆರೆಯಲು ಧೋನಿ ಸಜ್ಜಾಗಿದ್ದಾರೆ. ಈ ಕ್ರಮದಲ್ಲಿ ಅವರ ತಂಡ ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಕೋಳಿ ಫಾರ್ಮ್ವೊಂದಕ್ಕೆ 2000 ಕಡಕ್ನಾಥ್ ಕೋಳಿಗಳ ಆರ್ಡರ್ ಕೊಟ್ಟಿದ್ದರು.
ಆದ್ರೆ ಕೆಲ ದಿನಗಳಿಂದ ಹಕ್ಕಿ ಜ್ವರಕ್ಕೆ ಲಕ್ಷಾಂತರ ಪಕ್ಷಿಗಳು, ಕೋಳಿಗಳು ಸಾವನ್ನಪ್ಪುತ್ತಿವೆ. ಈ ಕ್ರಮದಲ್ಲಿ ಧೋನಿ ಆರ್ಡರ್ ಮಾಡಿದ 2000 ಸಾವಿರ ಕಡಕ್ನಾಥ್ ಕೋಳಿಗಳು ಸಹ ಹಕ್ಕಿ ಜ್ವರ ಸೋಂಕಿಗೆ ಬಲಿಯಾಗಿವೆ. ಹೀಗಾಗಿ ಕಡಕ್ನಾಥ್ ಕೋಳಿಯ ಆರ್ಡರ್ ರದ್ದಾಗಿದೆ.