ಕರ್ನಾಟಕ

karnataka

ETV Bharat / sports

ವಿರಾಟ್​ - ರೋಹಿತ್​ ಮಧ್ಯೆ ಅದೇ ವ್ಯತ್ಯಾಸ: ‘ಗಬ್ಬರ್​ ಸಿಂಗ್​’ - ರೋಹಿತ್​ ಶರ್ಮಾ ಸುದ್ದಿ

ಭಾರತ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಮತ್ತು ಆರಂಭಿಕ ಆಟಗಾರ ರೋಹಿತ್​ ಶರ್ಮಾ ಮಧ್ಯೆ ಇರುವ ಆಟದ ವ್ಯತ್ಯಾಸದ ಬಗ್ಗೆ ಎಡಗೈ ಸ್ಟೈ​ಲಿಷ್​​​ ಆಟಗಾರ ಶಿಖರ್​ ಧವನ್​ ಬಿಚ್ಚಿಟ್ಟಿದ್ದಾರೆ.

difference between Virat and Rohit, Dhawan describes difference between Virat and Rohit, difference between Virat and Rohit news, rohit Sharma news, Virat kohli news, Shikar Dhawan news, ರೋಹಿತ್ ಮತ್ತು ವಿರಾಟ್​ ಮಧ್ಯೆ ಅದೇ ವ್ಯತ್ಯಾಸ, ರೋಹಿತ್ ಮತ್ತು ವಿರಾಟ್​ ಮಧ್ಯೆ ಅದೇ ವ್ಯತ್ಯಾಸ ಎಂದ ಧವನ್​, ವಿರಾಟ್​ ಕೊಹ್ಲಿ ಸುದ್ದಿ, ರೋಹಿತ್​ ಶರ್ಮಾ ಸುದ್ದಿ, ಶಿಖರ್​ ಧವನ್​ ಸುದ್ದಿ,
ಸಂಗ್ರಹ ಚಿತ್ರ

By

Published : Jun 20, 2020, 6:29 AM IST

ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್​ ಶರ್ಮಾ ಒಮ್ಮೆ ಸೆಟ್​ ಆದ್ರೆ ಸಾಕು ಅವರನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸ್ಟೈಲಿಷ್​​​​ ಎಡಗೈ ಆಟಗಾರ ಶಿಖರ್​ ಧವನ್​ ಹೇಳಿದ್ದಾರೆ.

ಮಾಧ್ಯಮವೊಂದಕ್ಕೆ ಮಾತನಾಡಿದ ಅವರು, ಭಾರತ ಕ್ರಿಕೆಟ್​ ತಂಡದ ಆಟಗಾರರ ಬಗ್ಗೆ ಆಸಕ್ತಿಕರ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ತಂಡದಲ್ಲಿ ಪ್ರತಿಯೊಂದು ಜೋಡಿಗೆ ಒಂದೊಂದು ಶೈಲಿ ಇರುತ್ತೆ. ಆ ಜೋಡಿಯೇ ಟೀಂ ಇಂಡಿಯಾ ವಿಜಯಕ್ಕೆ ಕಾರಣವಾಗಿರುತ್ತೆ. ತಂಡದಲ್ಲಿ ಪ್ರತಿಯೊಬ್ಬ ಆಟಗಾರರು ತನ್ನದೇ ಆದ ಶೈಲಿ ಹೊಂದಿದ್ದು, ಅಂತಹ ಜೋಡಿಗಳನ್ನು ತಂಡದಲ್ಲಿ ರೂಪಿಸಲಾಗುವುದೆಂದು ಶಿಖರ್​ ಹೇಳಿದ್ದಾರೆ.

ರೋಹಿತ್​ ಶರ್ಮಾ, ನಾಯಕ ವಿರಾಟ್​ ಬ್ಯಾಟಿಂಗ್​ ಬಗ್ಗೆ ಮಾತನಾಡಿದ ಅವರು, ಹಿಟ್​ಮ್ಯಾನ್​ ಆಟ ಆಡುವಾಗ ಸ್ಪಲ್ಪ ಸಮಯವಕಾಶ ತೆಗೆದುಕೊಳ್ಳುತ್ತಾರೆ. ಬ್ಯಾಟಿಂಗ್​ ಸೆಟ್​ ಆದ್ರೆ ಅವರನ್ನು ನಿಲ್ಲಿಸಲು ಯಾರಿಂದ್ಲೂ ಸಾಧ್ಯವಾಗುವುದಿಲ್ಲ. ಮತ್ತೊಂದು ಬದಿ ವಿರಾಟ್​ ಕೊಹ್ಲಿ ಬ್ಯಾಟಿಂಗ್​ನಲ್ಲಿ ಕ್ಲಾಸ್​. ಆತನ ಆಟ ಅದ್ಭುತವಾಗಿರುತ್ತೆ. ಟೀಂ ಇಂಡಿಯಾ ಜೊತೆ ಆಡುವುದು ನನ್ನ ಅದೃಷ್ಟ ಎಂದು ಹೇಳಿದರು.

ಇಲ್ಲಿಯವರೆಗೆ ನನ್ನ ಆಟ ಇನ್ನೊಬ್ಬ ಆಟಗಾರನ ಜೊತೆ ಹೊಲಿಕೆ ಮಾಡಿಕೊಳ್ಳುತ್ತಿದ್ದೆ. ಆದ್ರೆ ಅದರ ಫಲಿತಾಂಶ ಮತ್ತೊಂದಾಗಿರುತ್ತಿತ್ತು. ಆಗೆ ಹೊಲಿಕೆ ಮಾಡಿಕೊಳ್ಳುವುದರಿಂದ ಅಸೂಯೆ ಉಂಟಾಗುತ್ತಿತ್ತು. ಅವರು ಚೆನ್ನಾಗಿ ಆಟವಾಡಲಿ ಎನ್ನಿಕೊಳ್ಳುತ್ತಿದ್ದೆ. ಆದ್ರೆ ಅವರಗಿಂತ ನಾನು ಇನ್ನು ಚೆನ್ನಾಗಿ ಆಟವಾಡಲಿ ಎಂದು ಮನದಲ್ಲಿ ಹೇಳಿಕೊಳ್ಳುತ್ತಿದೆ. ಬಳಿಕ ಪರಿಸ್ಥಿತಿ ತಿಳಿದು ಹಿಂದೆ ಸರಿದೆ. ನನ್ನ ಕನಸುಗಳನ್ನು ನನಸು ಮಾಡುವ ಹಾದಿ ಹಿಡಿದೆ. ಇತರರ ಜೊತೆ ಸ್ಪರ್ಧಿಸುವುದರಿಂದ ನಿಜವಾದ ಸಂತೋಷವನ್ನು ನಾನು ಕಳೆದುಕೊಳ್ಳುತ್ತಿದ್ದೆ. ಈಗ ಇಂತಹ ವಿಷಯಗಳಿಂದ ಹೊರಬಿದ್ದಿದ್ದೇನೆ. ನನ್ನ ಆಟ ಯಾರ ಜೊತೆಗೂ ಹೊಲಿಸಿಕೊಳ್ಳುವುದಿಲ್ಲ. ಇನ್ನು ಮುಂದೆ ಎರಡು ದಿನ ಕ್ರಿಕಟ್​ ಆಡಿದ್ರೂ, ಎರಡು ವರ್ಷ ಆಡಿದ್ರೂ ಆ ವಿಷಯ ನನ್ನನ್ನು ಪ್ರಭಾವಿತ ಮಾಡದು ಎಂದು ಗಬ್ಬರ್​ ಹೇಳಿದ್ದಾರೆ.

ABOUT THE AUTHOR

...view details