ಡೆಲ್ಲಿ: ನ್ಯೂಜಿಲ್ಯಾಂಡ್ ಪರ ಕೇವಲ 11 ಇನ್ನಿಂಗ್ಸ್ಗಳನ್ನಾಡಿರುವ ವಿಕೆಟ್ ಕೀಪರ್- ಬ್ಯಾಟ್ಸ್ಮನ್ ಡಿವೋನ್ ಕಾನ್ವೆ ಟಿ20 ರ್ಯಾಂಕಿಂಗ್ನಲ್ಲಿ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್‌ರಂತಹ ಸ್ಟಾರ್ ಬ್ಯಾಟ್ಸ್ಮನ್ಗಳನ್ನು ಹಿಂದಿಕ್ಕಿ ಟಾಪ್ 5ಕ್ಕೆ ಎಂಟ್ರಿಕೊಟ್ಟಿದ್ದಾರೆ.
ನ್ಯೂಜಿಲ್ಯಾಂಡ್ ಪರ 13 ಪಂದ್ಯಗಳನ್ನಾಡಿದ್ದು, 11 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಇತ್ತೀಚೆಗೆ ಬಾಂಗ್ಲಾದೇಶದ ವಿರುದ್ಧ 52 ಎಸೆತಗಳಲ್ಲಿ ಅಜೇಯ 92 ರನ್ಗಳಿಸಿದ್ದರು. ಈ ಇನ್ನಿಂಗ್ಸ್ನಂತರ ಅವರು 5 ಸ್ಥಾನ ಬಡ್ತಿ ಪಡೆದು ಭಾರತದ ವಿರಾಟ್ ಕೊಹ್ಲಿ(5) ಮತ್ತು ಕೆ.ಎಲ್.ರಾಹುಲ್(6)ರನ್ನು ಹಿಂದಿಕ್ಕಿ 4ನೇ ಶ್ರೇಯಾಂಕ ಪಡೆದಿದ್ದಾರೆ.