ಲಂಡನ್:ಡೇವಿಡ್ ವಾರ್ನರ್ ಶೀಘ್ರದಲ್ಲಿ ಏಕದಿನ ಕ್ರಿಕೆಟ್ನಲ್ಲಿ ಮತ್ತೆ ಸಾಮ್ರಾಟ್ ಆಗಲಿದ್ದಾರೆ ಎಂದು ವಿಶ್ವಕಪ್ಗೂ ಮುನ್ನ ಆಸೀಸ್ ಕ್ಯಾಪ್ಟನ್ ಫಿಂಚ್ ಹೇಳಿದ ಮಾತನ್ನ ವಾರ್ನರ್ ಸತ್ಯ ಮಾಡಿ ತೋರಿಸಿದ್ದಾರೆ.
ತಿಳಿದೋ, ತಿಳಿಯದೆಯೋ ಬಾಲ್ ಟ್ಯಾಂಪರಿಂಗ್ ಘಟನೆಯಲ್ಲಿ ಭಾಗಿಯಾಗಿ ಒಂದು ವರ್ಷ ನಿಷೇಧಕ್ಕೊಳಗಾಗಿದ್ದ ಡೇವಿಡ್ ವಾರ್ನರ್, ಒಂದು ವರ್ಷ ಕ್ರಿಕೆಟ್ ಇಲ್ಲದೇ ಕುಗ್ಗಿದ್ದರು. ರಸ್ತೆಗಳಲ್ಲಿ ನಡೆದಾಡುತ್ತಿದ್ದರು, ಕೈಯಲ್ಲಿ ಬ್ಯಾಟ್ ಹಿಡಿದಂತೆ ಫೀಲ್ ಮಾಡುತ್ತಿದ್ದ ವಾರ್ನರ್ ಕೆಲವು ಚಿತ್ರಗಳು ಇಂಟರ್ನೆಟ್ನಲ್ಲಿ ವೈರಲ್ ಆಗಿತ್ತು. ಈ ಸಂದರ್ಭದಲ್ಲಿ ಲಕ್ಷಾಂತರ ಅಭಿಮಾನಿಗಳು ವಾರ್ನರ್ ಪರ ನಿಂತಿದ್ದರು. ಮತ್ತೆ ಕ್ರಿಕೆಟ್ನಲ್ಲಿ ನಿಮಗೆ ಉಜ್ವಲ ಭವಿಷ್ಯವಿದೆ ಎಂದು ಬೆಂಬಲ ನೀಡಿದ್ದರು. ಇದೀಗ ವಾರ್ನರ್ ಎಲ್ಲರ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.
ವಿಶ್ವಕಪ್ ಆಯ್ಕೆಯೂ ಕಷ್ಟವೆನಿಸಿದ್ದ ಸಂದರ್ಭದಲ್ಲಿ ಐಪಿಎಲ್ ವಾರ್ನರ್ರನ್ನು ಆಸ್ಟ್ರೇಲಿಯ ತಂಡ ಸೇರುವಂತೆ ಮಾಡಿತ್ತು. ಸನ್ರೈಸರ್ಸ್ ಪರ ಬ್ಯಾಟ್ ಬೀಸಿದ್ದ ವಾರ್ನರ್ ಬರೋಬ್ಬರಿ 692 ರನ್ ಸಿಡಿಸಿ ವಿಶ್ವಕಪ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು.