ಚೆನ್ನೈ :ಕಳೆದ ವಾರ ಕೋವಿಡ್-19 ಟೆಸ್ಟ್ನಲ್ಲಿ ಪಾಸಿಟಿವ್ ಪಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಇಂದು ನೆಗೆಟಿವ್ ಫಲಿತಾಂಶ ಪಡೆದಿದ್ದಾರೆಂದು ತಿಳಿದು ಬಂದಿದೆ.
ಆದರೆ, ಆರ್ಸಿಬಿ ಪಾಳಯ ಸೇರುವ ಮುನ್ನ ಅವರು ಮತ್ತೆ ಎರಡು ಟೆಸ್ಟ್ಗಳಿಗೆ ಒಳಗಾಗಬೇಕಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಮಾರ್ಚ್ 22ರಂದು ನಡೆಸಿದ್ದ ಪರೀಕ್ಷೆಯಲ್ಲಿ ಪಡಿಕ್ಕಲ್ಗೆ ಪಾಸಿಟಿವ್ ದೃಢಪಟ್ಟಿತ್ತು. ಅವರು ಬೆಂಗಳೂರಿನಲ್ಲಿರುವ ತಮ್ಮ ಮನೆಯಲ್ಲಿಯೇ ಕ್ವಾರಂಟೈನ್ಗೆ ಒಳಗಾಗಿದ್ದರು.
ವರದಿಗಳ ಪ್ರಕಾರ ದೇವದತ್ ಪಡಿಕ್ಕಲ್ ಏಪ್ರಿಲ್ 9ರಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಉದ್ಘಾಟನಾ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ, ಇದರ ಬಗ್ಗೆ ಫ್ರಾಂಚೈಸಿ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ.
2019ರಲ್ಲಿ ಆರ್ಸಿಬಿ ಸೇರಿದ್ದ ಯುವ ಬ್ಯಾಟ್ಸ್ಮನ್ 2020ರಲ್ಲಿ ಎಲ್ಲಾ ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದಿದ್ದರು. ಅವರು 15 ಪಂದ್ಯಗಳಿಂದ 5 ಅರ್ಧಶತಕಗಳ ಸಹಿತ 473 ರನ್ಗಳಿಸಿದ್ದರು.
ಇದನ್ನು ಓದಿ: 25 ವರ್ಷದ ಈ ಆಟಗಾರ ನನಗೆ ಪೋಲಾರ್ಡ್ರನ್ನು ನೆನಪಿಸುತ್ತಿದ್ದಾರೆ : ಅನಿಲ್ ಕುಂಬ್ಳೆ