ಕರ್ನಾಟಕ

karnataka

By

Published : Dec 9, 2019, 3:45 PM IST

ETV Bharat / sports

ರಣಜಿಯಲ್ಲೂ ಆರ್ಭಟ ಮುಂದುವರಿಸಿದ ದೇವದತ್​ ಪಡಿಕ್ಕಲ್​

ತಮಿಳುನಾಡು ವಿರುದ್ಧದ ರಣಜಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡುತ್ತಿರುವ ಕರ್ನಾಟಕ ತಂಡ ದೇವದತ್​ ಪಡಿಕ್ಕಲ್​ ಹಾಗೂ ಪವನ್​ ದೇಶಪಾಂಡೆ ಅವರ ಅರ್ಧಶತಕದ ನೆರವಿನಿಂದ 204 ರನ್​ಗಳಿಸಿ ಬ್ಯಾಟಿಂಗ್​ ನಡೆಸುತ್ತಿದೆ.

Devdutt Padikka news
Devdutt Padikka news

ದಿಂಡಿಗಲ್(ತಮಿಳುನಾಡು)​: ಕರ್ನಾಟಕದ ಯುವ ಆಟಗಾರ ದೇವದತ್​ ಪಡಿಕ್ಕಲ್ ರಣಜಿ ಕ್ರಿಕೆಟ್​ನಲ್ಲೂ​ ತಮ್ಮ ಬ್ಯಾಟಿಂಗ್ ವೈಭವವನ್ನು ಮುಂದುವರಿಸಿದ್ದಾರೆ.

ತಮಿಳುನಾಡಿನ ವಿರುದ್ಧದ ರಣಜಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡುತ್ತಿರುವ ಕರ್ನಾಟಕ ತಂಡ ದೇವದತ್​ ಪಡಿಕ್ಕಲ್​ ಹಾಗೂ ಪವನ್​ ದೇಶಪಾಂಡೆ ಅವರ ಅರ್ಧಶತಕದ ನೆರವಿನಿಂದ 204 ರನ್​ಗಳಿಸಿ ಬ್ಯಾಟಿಂಗ್​ ಮುಂದುವರಿಸಿದೆ.

ಇದೇ ವರ್ಷದಲ್ಲಿ ನಡೆದ 50 ಓವರ್​ಗಳ ವಿಜಯ್​ ಹಜಾರೆ, ಸಯ್ಯದ್ ಮುಷ್ತಾಕ್​ ಅಲಿ ಟಿ20ಯಲ್ಲಿ ಗರಿಷ್ಠ ಸ್ಕೋರರ್​ ಆಗಿದ್ದ ಪಡಿಕ್ಕಲ್​ ಇಂದಿನಿಂದ ಆರಂಭವಾಗಿರುವ ರಣಜಿಯಲ್ಲೂ 78 ರನ್​ಗಳಿಸಿ ಮಿಂಚಿದ್ದಾರೆ. ಆದರೆ ತಮ್ಮ ಚೊಚ್ಚಲ ಶತಕಗಳಿಸುವ ಅವಕಾಶವನ್ನು ಸ್ವಲ್ಪದರಲ್ಲೇ ಮಿಸ್​ ಮಾಡಿಕೊಂಡಿದ್ದಾರೆ.

19 ವರ್ಷದ ಪಡಿಕ್ಕಲ್​ ವಿಜಯ್​ ಹಜಾರೆಯಲ್ಲಿ 11 ಪಂದ್ಯಗಳಿಂದ 2 ಶತಕ ಹಾಗೂ 5 ಅರ್ಧಶತಕ ಸೇರಿದಂತೆ 609 ರನ್​ಗಳಿಸಿದರೆ, ಸಯ್ಯದ್​ ಮುಷ್ತಾಕ್​ ಅಲಿ ಟಿ20 ಟೂರ್ನಿಯಲ್ಲಿ 12 ಪಂದ್ಯಗಳಿಂದ 580 ರನ್​ ಗಳಿಸಿ, ಟಾಪ್​ ಸ್ಕೋರರ್​ ಎನಿಸಿಕೊಂಡಿದ್ದರು. ಇವೆರಡೂ ಟ್ರೋಫಿಗಳು ಕರ್ನಾಟಕದ ಪಾಲಾಗಿದ್ದವು.

ಇದೀಗ ರಣಜಿ ಕ್ರಿಕೆಟ್​ನಲ್ಲೂ ಆಡಿದ ಮೊದಲ ಪಂದ್ಯದಲ್ಲೇ 78 ರನ್​ಗಳಿಸಿದ್ದು, ರಣಜಿ ಕ್ರಿಕೆಟ್​ನಲ್ಲೂ ತಮ್ಮ ಬ್ಯಾಟಿಂಗ್​ ಪ್ರದರ್ಶನ ಕಾಯ್ದುಕೊಂಡಿರುವುದು ಕನ್ನಡಿಗರ ಸಂತೋಷಕ್ಕೆ ಕಾರಣವಾಗಿದೆ.

ABOUT THE AUTHOR

...view details