ಕರ್ನಾಟಕ

karnataka

ETV Bharat / sports

ವಿಜಯ್ ಹಜಾರೆ ಟ್ರೋಫಿಯಲ್ಲಿ ಪಡಿಕ್ಕಲ್ ಅಬ್ಬರದ ಶತಕ: ಕರ್ನಾಟಕಕ್ಕೆ 101ರನ್​ಗಳ ಜಯ - Karnataka won by 101 run

ಕರ್ನಾಟಕ ತಂಡ ಆಡಿರುವ 3 ಪಂದ್ಯಗಳಲ್ಲಿ 2 ಗೆಲುವು ಹಾಗೂ 1 ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ ಸಿ ಗುಂಪಿನಲ್ಲಿ 2ನೇ ಸ್ಥಾನಲ್ಲಿದೆ. ಫೆಬ್ರವರಿ 26 ರಂದು 3ಕ್ಕೆ 3 ಪಂದ್ಯ ಗೆದ್ದಿರುವ ಕೇರಳ ತಂಡದ ಎದುರು ಸೆಣಸಾಡಲಿದೆ. ಈ ಪಂದ್ಯ ಕ್ವಾರ್ಟರ್ ಫೈನಲ್ ಪ್ರವೇಶಿಸಿಲು ನಿರ್ಣಾಯಕವಾಗಲಿದೆ.

ವಿಜಯ್ ಹಜಾರೆ ಟ್ರೋಫಿ
ಕರ್ನಾಟಕಕ್ಕೆ 101ರನ್​ಗಳ ಜಯ

By

Published : Feb 24, 2021, 7:55 PM IST

ಬೆಂಗಳೂರು: ಯುವ ಬ್ಯಾಟ್ಸ್​ಮನ್​ ದೇವದತ್​ ಪಡಿಕ್ಕಲ್​ ಸಿಡಿಸಿದ ಅಬ್ಬರದ ಶತಕ ಮತ್ತು ಬೌಲರ್​ಗಳ ನೆರವಿನಿಂದ ಕರ್ನಾಟಕ ತಂಡ ವಿಜಯ ಹಜಾರೆ ಟ್ರೋಫಿಯ ಮೂರನೇ ಪಂದ್ಯದಲ್ಲಿ ಒಡಿಶಾ ವಿರುದ್ಧ 101ರನ್​ಗಳ ಜಯ ಸಾಧಿಸಿದೆ.

ಬೆಂಗಳೂರಿನ ಆಲೂರು ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ನೀಡಿದ 330 ರನ್​ಗಳ ಬೃಹತ್ ​ಗುರಿಯನ್ನು ಬೆನ್ನತ್ತಿದ ಒಡಿಶಾ ತಂಡ 44 ಓವರ್​ಗಳಲ್ಲಿ 228 ರನ್​ಗಳಿಗೆ ಆಲೌಟ್ ಆಗಿ 101 ರನ್​ಗಳಿಂದ ಸೋಲು ಕಂಡಿತು.

ಸುಭ್ರಾಂಸು ಸೆನಾಪತಿ 92 ಎಸೆತಗಳಲ್ಲಿ 78, ಅಂಕಿತ್ ಯಾದವ್​ 63 ಎಸೆತಗಳಲ್ಲಿ 56 ರನ್​ಗಳಿಸಿದ್ದು, ಬಿಟ್ಟರೆ ಒಡಿಶಾದ ಯಾವ ಬ್ಯಾಟ್ಸ್​ಮನ್​ ಕರ್ನಾಟಕ ಬೌಲಿಂಗ್ ದಾಳಿಯ ಮುಂದೆ ನಿಲ್ಲಲಾಗಲಿಲ್ಲ.

ವೇಗಿ ಪ್ರಸಿಧ್​ ಕೃಷ್ಣ 46 ರನ್​ ನೀಡಿ 3 ವಿಕೆಟ್​ ಪಡೆದರೆ, ಶ್ರೇಯಸ್ ಗೋಪಾಲ್ 47 ರನ್​ ನೀಡಿ 3 ವಿಕೆಟ್​ ಪಡೆದರು. ವೈಶಾಕ್ ಮತ್ತು ಸುಚಿತ್ ತಲಾ ಒಂದು ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಯುವ ಬ್ಯಾಟ್ಸ್​ಮನ್ ದೇವ​ದತ್​ ಪಡಿಕ್ಕಲ್ ಅವರ ಶತಕದ ನೆರವಿನಿಂದ 329 ರನ್​ಗಳ ಬೃಹತ್ ಮೊತ್ತ ದಾಖಲಿಸಿತ್ತು. ಪಡಿಕ್ಕಲ್​ 140 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 14 ಬೌಂಡರಿಗಳ ನೆರವಿನಿಂದ 152 ರನ್​ ಸಿಡಿಸಿದರೆ, ಅಭಿಮನ್ಯು ಮಿಥುನ್ ಕೇವಲ 17 ಎಸೆತಗಳಲ್ಲಿ 5 ಸಿಕ್ಸರ್​ಗಳ ಸಹಿತ ಅಜೇಯ 40 ರನ್​ಗಳಿಸಿದರು. ನಾಯಕ ಸಮರ್ಥ್​ 60, ಸಿದ್ಧಾರ್ಥ್​ ಕೆವಿ 41 ರನ್​ಗಳಿಸಿದರು.

ಕರ್ನಾಟಕ ತಂಡ ಆಡಿರುವ 3 ಪಂದ್ಯಗಳಲ್ಲಿ 2 ಗೆಲುವು ಹಾಗೂ 1 ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿ ಸಿ ಗುಂಪಿನಲ್ಲಿ 2ನೇ ಸ್ಥಾನಲ್ಲಿದೆ. ಫೆಬ್ರವರಿ 26 ರಂದು 3ಕ್ಕೆ 3 ಪಂದ್ಯ ಗೆದ್ದಿರುವ ಕೇರಳ ತಂಡದೆದುರು ಸೆಣಸಾಡಲಿದೆ. ಈ ಪಂದ್ಯ ಕ್ವಾರ್ಟರ್ ಫೈನಲ್ ಪ್ರವೇಶಿಸಿಲು ನಿರ್ಣಾಯಕವಾಗಲಿದೆ.

ಇದನ್ನು ಓದಿ:ವಿಜಯ್ ಹಜಾರೆ ಟ್ರೋಫಿ.. ಒಡಿಶಾ ವಿರುದ್ಧ 152 ರನ್​ ಚಚ್ಚಿದ ದೇವದತ್​ ಪಡಿಕ್ಕಲ್​..

ABOUT THE AUTHOR

...view details