ಕರ್ನಾಟಕ

karnataka

ETV Bharat / sports

ಲಾಕ್​ಡೌನ್​ ಓಪನ್ ಆದ್ರೆ ಮೂರು ವರ್ಷ ಮನೆಗೆ ಬರಲ್ವಂತೆ ಚಹಾಲ್​... ಕಾರಣ ಏನು!? - ಮಹಾಮಾರಿ ಕೊರೊನಾ

ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸಿರುವ ದೇಶ ಮುಂದಿನ 15 ದಿನಗಳ ಕಾಲ ಲಾಕ್​ಡೌನ್ ವಿಸ್ತರಣೆ​ ಮಾಡಿದ್ದು, ಹೀಗಾಗಿ ಜನರು ಮತ್ತೆ 15 ದಿನಗಳ ಕಾಲ ಮನೆಯಲ್ಲಿ ಉಳಿದುಕೊಳ್ಳುವಂತಹ ಸ್ಥಿತಿ ನಿರ್ಮಾಣಗೊಂಡಿದೆ.

Yuzvendra Chahal
Yuzvendra Chahal

By

Published : Apr 11, 2020, 7:15 PM IST

ನವದೆಹಲಿ:ದೇಶದಲ್ಲಿ ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ಮುಂದುವರೆದಿದ್ದು, ಏಪ್ರಿಲ್​ 30ರವರೆಗೆ ಲಾಕ್​ಡೌನ್​ ಮುಂದುವರಿಯುವುದು ಬಹುತೇಕ ಕನ್ಫರ್ಮ್​ ಆಗಿದೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಟೀಂ ಇಂಡಿಯಾ ಲೆಗ್​ ಸ್ಪೀನ್ನರ್​ ಯಜುವೇಂದ್ರ ಚಹಾಲ್​, ದೇಶದಲ್ಲಿ ಒಂದು ವೇಳೆ ಲಾಕ್​ಡೌನ್​ ಓಪನ್​ ಆದರೆ, ಬರೋಬ್ಬರಿ ಮೂರು ವರ್ಷಗಳ ಕಾಲ ಮನೆಯಿಂದ ಹೊರಗಡೆ ಇರಬಹುದು ಎಂದಿದ್ದಾರೆ.

ಮನೆಯಲ್ಲೇ ಲಾಕ್​ ಆಗಿರುವ ನಾನು, ಲಾಕ್​ಡೌನ್​ ಓಪನ್​ ಆದ್ರೆ ಯಾವುದೇ ಕಾರಣಕ್ಕೂ ಮನೆಗೆ ಬರಲ್ಲ. ತುಂಬಾ ದಿನಗಳ ಕಾಲ ಮನೆಯಲ್ಲಿರಲ್ಲ. ಮನೆಯಲ್ಲಿ ಈಗ ಉಳಿದಿರುವ ದಿನಗಳು ಮುಂದೆ ಅನೇಕ ವರ್ಷಗಳ ಕಾಲ ವಾಪಸ್ ಮನೆಗೆ ಬರದಂತೆ ಮಾಡಿವೆ ಎಂದಿದ್ದಾರೆ.

ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಬೌಲಿಂಗ್​ ಮಾಡುವ ಈ ಪ್ಲೇಯರ್​, ಮೈದಾನಕ್ಕೆ ಹೋಗಿ ಬೌಲಿಂಗ್​ ಮಾಡಬೇಕು ಎಂದು ಅನಿಸುತ್ತದೆ. ತುಂಬಾ ಕ್ರಿಕೆಟ್​​ ನನ್ನಲ್ಲಿ ಬಾಕಿ ಉಳಿದಿದೆ ಎಂದಿದ್ದಾರೆ.

ABOUT THE AUTHOR

...view details