ಕರ್ನಾಟಕ

karnataka

ETV Bharat / sports

ಎಲ್ಲ ಮಾದರಿ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ರಜತ್​ ಭಾಟಿಯಾ - ಎಲ್ಲಾ ಮಾದರಿಯ ಕ್ರಿಕೆಟ್​ ಭಾಟಿಯಾ ನಿವೃತ್ತಿ

ಆಲ್ ರೌಂಡರ್ ಆಗಿ ಗುರುತಿಸಿಕೊಂಡಿದ್ದ ರಜತ್ ಭಾಟಿಯಾ ರಣಜಿ ಕ್ರಿಕೆಟ್​ನಲ್ಲಿ ದೆಹಲಿ, ತಮಿಳುನಾಡು ಹಾಗೂ ಉತ್ತರಾಖಂಡ ತಂಡಗಳ ಪರ ಆಡಿದ್ದರು. ಇವರು ಒಟ್ಟಾರೆ 112 ಪ್ರಥಮ ದರ್ಜೆ ಕ್ರಿಕೆಟ್​ ಪಂದ್ಯಗಳಿಂದ 17 ಶತಕಗಳ ಸಹಿತ 6,482 ರನ್ ಗಳಿಸಿದ್ದು, ಬೌಲಿಂಗ್​ನಲ್ಲೂ ಕೂಡ137 ವಿಕೆಟ್ ಪಡೆದಿದ್ದಾರೆ. 119 ಲಿಸ್ಟ್​ ಎ ಪಂದ್ಯಗಳಿಂದ 3,038 ರನ್​, 146 ಟಿ-20 ಪಂದ್ಯಗಳಿಂದ 1,251 ರನ್​ಗಳಿಸಿದ್ದಾರೆ.

ರಜತ್​ ಭಾಟಿಯಾ
ರಜತ್​ ಭಾಟಿಯಾ

By

Published : Jul 29, 2020, 12:16 PM IST

ನವದೆಹಲಿ: ದೆಹಲಿ ತಂಡದ ಹಿರಿಯ ರಣಜಿ ಕ್ರಿಕೆಟ್ ಆಟಗಾರ ರಜತ್ ಭಾಟಿಯಾ ಎಲ್ಲ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ.

ಆಲ್ ರೌಂಡರ್ ಆಗಿ ಗುರುತಿಸಿಕೊಂಡಿದ್ದ ರಜತ್ ಭಾಟಿಯಾ ರಣಜಿ ಕ್ರಿಕೆಟ್​ನಲ್ಲಿ ದೆಹಲಿ, ತಮಿಳುನಾಡು ಹಾಗೂ ಉತ್ತರಾಖಂಡ ತಂಡಗಳ ಪರ ಆಡಿದ್ದರು. ಇವರು ಒಟ್ಟಾರೆ 112 ಪ್ರಥಮ ದರ್ಜೆ ಕ್ರಿಕೆಟ್​ ಪಂದ್ಯಗಳಿಂದ 17 ಶತಕಗಳ ಸಹಿತ 6,482 ರನ್ ಗಳಿಸಿದ್ದು , ಬೌಲಿಂಗ್​ನಲ್ಲೂ ಕೂಡ137 ವಿಕೆಟ್ ಪಡೆದಿದ್ದಾರೆ. 119 ಲಿಸ್ಟ್​ ಎ ಪಂದ್ಯಗಳಿಂದ 3,038 ರನ್​, 146 ಟಿ20 ಪಂದ್ಯಗಳಿಂದ 1251 ರನ್​ಗಳಿಸಿದ್ದಾರೆ.

1999/ 2000ರದ ಆವೃತ್ತಿಯ ರಣಜಿ ಟ್ರೋಫಿಯಲ್ಲಿ ತಮಿಳುನಾಡು ತಂಡದ ಪರ ಪದಾರ್ಪಣ ಮಾಡಿದ್ದ ಭಾಟಿಯಾ , ಆವೃತ್ತಿಯ ನಂತರ ತಮ್ಮ ತವರೂರಾದ ದೆಹಲಿ ತಂಡಕ್ಕೆ ಸೇರಿಕೊಂಡಿದ್ದರು. ಅವರು 2008ರ ರಣಜಿ ಚಾಂಪಿಯನ್ ಆದ ದೆಹಲಿ ತಂಡದಲ್ಲಿ ಆಡಿದ್ದರು. ಫೈನಲ್​ ಪಂದ್ಯದಲ್ಲಿ ಅಜೇಯ ಶತಕ(139) ಸಿಡಿಸಿ ಟ್ರೋಫಿ ಗೆಲ್ಲಲು ನೆರವಾಗಿದ್ದರು. ನಂತರ ಕೆಲವು ಸಮಯ ರಾಜಸ್ಥಾನ್​ ಹಾಗೂ ಉತ್ತರಾಖಂಡ್​ ತಂಡದಲ್ಲಿ ಕಾಣಿಸಿಕೊಂಡಿದ್ದರು.

ಇನ್ನು ಐಪಿಎಲ್​ನಲ್ಲೂ ಡೆಲ್ಲಿ ಡೇರ್​ ಡೇವಿಲ್ಸ್, ರಾಜಸ್ಥಾನ್​ ರಾಯಲ್ಸ್​, ಕೋಲ್ಕತ್ತಾ ನೈಟ್​ ರೈಡರ್ಸ್​ ಹಾಗೂ ರೈಸಿಂಗ್ ಪುಣೆ ಜೇಂಟ್ಸ್​ ತಂಡದ ಪರ ಕಾಣಿಸಿಕೊಂಡಿದ್ದಾರೆ. ಇವರು​ 2012ರಲ್ಲಿ ಪ್ರಶಸ್ತಿ ಗೆದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ ಭಾಗವಾಗಿದ್ದರು. ಆ ಸೀಸನ್​ನಲ್ಲಿ ಭಾಟಿಯ 12 ವಿಕೆಟ್​ ಪಡೆದಿದ್ದರು. ಈ ಸಾದನೆಯಿಂದ ಮುಂದಿನ ಆವೃತ್ತಿಯಲ್ಲಿ ರಾಜಸ್ಥಾನ್​ ರಾಯಲ್ಸ್​ 1.7 ಕೋಟಿ ರೂ ನೀಡಿ ಖರೀದಿಸಿತ್ತು. ಇವರು ಒಟ್ಟಾರೆ 95 ಐಪಿಎಲ್​ ಪಂದ್ಯಗಳಿಂದ 71 ವಿಕೆಟ್​ ಪಡೆದಿದ್ದಾರೆ.

ABOUT THE AUTHOR

...view details