ಕರ್ನಾಟಕ

karnataka

ETV Bharat / sports

ಅಶ್ವಿನ್ ಕೆಕೆಆರ್​ ವಿರುದ್ಧದ ಪಂದ್ಯದ ವೇಳೆಗೆ ತಂಡ ಸೇರ್ಪಡೆ: ಡೆಲ್ಲಿ ಬೌಲಿಂಗ್​ ಕೋಚ್​ ಹ್ಯಾರಿಸ್​ ವಿಶ್ವಾಸ - ಐಪಿಎಲ್ 2020 ಲೈವ್ ಅಪ್ಡೇಟ್ಸ್

ಶಾರ್ಜಾದಲ್ಲಿ ನಡೆಯಲಿರುವ ಐಪಿಎಲ್​ 16ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತನ್ನ 4 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ಸೆಣಸಾಡಲಿದ್ದಾರೆ. ಎರಡು ತಂಡಗಳೂ ಆಡಿರುವ 3 ಪಂದ್ಯಗಳಲ್ಲಿ 2 ಗೆಲುವು ಹಾಗೂ ಒಂದು ಸೋಲು ಕಂಡಿವೆ. ಇಂದು ಗೆಲ್ಲುವ ತಂಡ ಮೊದಲ ಸ್ಥಾನಕ್ಕೇರಲಿದೆ.

Delhi Capitals
ರವಿಚಂದ್ರನ್ ಅಶ್ವಿನ್

By

Published : Oct 3, 2020, 4:14 PM IST

ದುಬೈ: ಐಪಿಎಲ್​ನಲ್ಲಿ ಡೆಲ್ಲಿ ಪರ ಆಡಿದ ಮೊದಲ ಪಂದ್ಯದಲ್ಲೇ ಭುಜದ ನೋವಿಗೆ ತುತ್ತಾಗಿದ್ದ ರವಿಚಂದ್ರನ್ ಅಶ್ವಿನ್ ಇಂದು ಸಂಜೆ ಕೆಕೆಆರ್​ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಕಣಕ್ಕಿಳಿಯಬಹುದು ಎಂದು ಬೌಲಿಂಗ್ ಕೋಚ್ ರಿಯಾನ್ ಹ್ಯಾರಿಸ್​ ಹೇಳಿದ್ದಾರೆ.

ಶಾರ್ಜಾದಲ್ಲಿ ನಡೆಯಲಿರುವ ಐಪಿಎಲ್​ 16ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತನ್ನ 4 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ವಿರುದ್ಧ ಸೆಣಸಾಡಲಿದ್ದಾರೆ. ಎರಡು ತಂಡಗಳೂ ಆಡಿರುವ 3 ಪಂದ್ಯಗಳಲ್ಲಿ 2 ಗೆಲುವು ಹಾಗೂ ಒಂದು ಸೋಲು ಕಂಡಿವೆ. ಇಂದು ಗೆಲ್ಲುವ ತಂಡ ಮೊದಲ ಸ್ಥಾನಕ್ಕೇರಲಿದೆ.

ಅಶ್ವಿನ್​ ವೇಗವಾಗಿ ಚೇತರಿಸಿಕೊಂಡಿದ್ದಾರೆ. ಅವರು ತಂಡದ ಬಹುಮುಖ್ಯ ಆಟಗಾರನಾಗಿದ್ದಾರೆ ಎಂದಿರುವ ಹ್ಯಾರಿಸ್, ಆಶ್ವಿನ್​ರನ್ನು ಇಂದಿನ ಪಂದ್ಯಕ್ಕೂ ಆಯ್ಕೆ ಮಾಡಬೇಕೇ ಎಂಬುದು ವೈದ್ಯಕೀಯ ತಂಡಕ್ಕೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ.

ಅವರು(ಅಶ್ವಿನ್​) ನಿನ್ನೆ ರಾತ್ರಿಯ ಸೆಸನ್​ನಲ್ಲಿ ಉತ್ತಮ ಬ್ಯಾಟಿಂಗ್ ಮತ್ತು ಬೌಲಿಂಗ್​ ಮಾಡಿದ್ದಾರೆ. ಹಾಗಾಗಿ ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ. ಆದರೂ ನಾವೂ ವೈದ್ಯಕೀಯ ತಂಡದ ಖಚಿತತೆಗಾಗಿ ಕಾಯುತ್ತಿದ್ದೇವೆ ಎಂದು ಹಿಂದೂಸ್ತಾನ್​ ಟೈಮ್ಸ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಕ್ಯಾಪಿಟಲ್​ ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೂಪರ್ ಓವರ್​ನಲ್ಲಿ ಜಯ ಸಾಧಿಸಿದರೆ, 2 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ಗೆಲುವು ಸಾಧಿಸಿತ್ತು. ಆದರೆ ಕಳೆದ ಪಂದ್ಯದಲ್ಲಿ ಸನ್​ರೈಸರ್ಸ್​ ವಿರುದ್ಧ 15 ರನ್​ಗಳ ಸೋಲು ಕಂಡಿದೆ.

ABOUT THE AUTHOR

...view details