ನವದೆಹಲಿ:ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕನ್ನಡದಲ್ಲಿ ಟ್ವೀಟ್ ಮಾಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹಾಡಿಹೊಗಳಿದೆ.
ಡೆಲ್ಲಿ ಕ್ಯಾಪಿಟಲ್ಸ್ ಅಧಿಕೃತ ಟ್ವಿಟರ್ನಿಂದ ಟ್ವೀಟ್ ಮಾಡಲಾಗಿದ್ದು, 'ಈ ಸೀಸನ್ನಲ್ಲಿ, ಮೈದಾನದಲ್ಲಿ ನೀವು ನಮ್ಮೆದುರು ತೋರಿಸಿದ ಕೆಚ್ಚೆದೆಯ ಆಟಕ್ಕೆ ಮತ್ತು ದಿಟ್ಟ ಹೋರಾಟಕ್ಕೆ ಒಂದು ಸಲ್ಯೂಟ್' ಆರ್ಸಿಬಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. ಇದರ ಜೊತೆಗೆ ಎರಡೂ ತಂಡದ ನಾಯಕರಾದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಅವರು ಜೊತೆಯಾಗಿರುವ ಫೋಟೋ ಶೇರ್ ಮಾಡಲಾಗಿದೆ. ಇನ್ನು ಕನ್ನಡದಲ್ಲಿ ಮಾಡಿರುವ ಟ್ವೀಟ್ ಬಗ್ಗೆ, ಅದರಲ್ಲೂ ಬೆಂಗಳೂರು ತಂಡವನ್ನು ಹೊಗಳಿರುವುದು ಕನ್ನಡಿಗರಿಗೆ ಸಖತ್ ಖುಷಿ ನೀಡಿದೆ.