ಕರ್ನಾಟಕ

karnataka

ETV Bharat / sports

ದೀಪಕ್ ಹೂಡ 62: ನಿರ್ಣಾಯಕ ಪಂದ್ಯದಲ್ಲಿ 154 ರನ್​ಗಳ ಸಾಧಾರಣ ಗುರಿ ನೀಡಿದ ಪಂಜಾಬ್​ - ಪಂಜಾಬ್​ vs ಚೆನ್ನೈ ಪಂಜಾಬ್​ vs ಚೆನ್ನೈ ಮ್ಯಾಚ್ ಭವಿಷ್ಯ

ಚೆನ್ನೈ ಪರ ಲುಂಗಿ ಎಂಗಿಡಿ 39 ಕ್ಕೆ 3, ಜಡೇಜಾ 17ಕ್ಕೆ1, ತಾಹೀರ್ 24ಕ್ಕೆ 1 ಹಾಗೂ ಶಾರ್ದುಲ್ ಟಾಕೂರ್​ 27ಕ್ಕೆ 1 ವಿಕೆಟ್​ ಪಡೆದು ಮಿಂಚಿದರು.

ದೀಪಕ್ ಹೂಡ 62
ದೀಪಕ್ ಹೂಡ 62

By

Published : Nov 1, 2020, 5:28 PM IST

ಅಬುಧಾಬಿ: ದೀಪಕ್​ ಹೂಡ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಕಿಂಗ್ಸ್​ ಇಲೆವೆನ್ ಪಂಜಾಬ್​ ತಂಡ ಸಿಎಸ್​ಕೆಗೆ 154 ರನ್​ಗಳ ಸಾಧಾರಣ ಗುರಿ ನೀಡಿದೆ.

ಟಾಸ್​ ಸೋತು ಬ್ಯಾಟಿಂಗ್ ಇಳಿದ ಪಂಜಾಬ್​ ಮೊದಲ ವಿಕೆಟ್​ಗೆ 48ರನ್​ಗಳ ಜೊತೆಯಾಟ ನಡೆಸಿ ಉತ್ತಮ ಆರಂಭ ನೀಡಿದರು. ಆದರೆ ಮಯಾಂಕ್​ 26 ಮತ್ತು ರಾಹುಲ್​ 29 ರನ್​ಗಳಿಸಿ ಲುಂಗಿ ಎಂಗಿಡಿಗೆ ವಿಕೆಟ್ ಒಪ್ಪಿಸಿದರು.

ಇವರಿಬ್ಬರ ನಂತರ ಬಂದ ಗೇಲ್​ 12, ಪೂರನ್​ 2, ಮಂದೀಪ್ ಸಿಂಗ್ 14, ನೀಶಮ್ 2 ರನ್​ಗಳಿಗೆ ವಿಕೆಟ್​ ಒಪ್ಪಿಸುವ ಮೂಲಕ ನಿರ್ಣಾಯಕ ಪಂದ್ಯದಲ್ಲಿ ರನ್​ಗಳಿಸಲು ವಿಫಲರಾದರು.

ಆದರೆ ಏಕಾಂಗಿ ಹೋರಾಟ ನಡೆಸಿದ ದೀಪಕ್ ಹೂಡ ಕೇವಲ 30 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ 62 ರನ್​ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

ಚೆನ್ನೈ ಪರ ಲುಂಗಿ ಎಂಗಿಡಿ 39 ಕ್ಕೆ 3, ಜಡೇಜಾ 17ಕ್ಕೆ1, ತಾಹೀರ್ 24ಕ್ಕೆ 1 ಹಾಗೂ ಶಾರ್ದುಲ್ ಟಾಕೂರ್​ 27ಕ್ಕೆ 1 ವಿಕೆಟ್​ ಪಡೆದು ಮಿಂಚಿದರು.

ABOUT THE AUTHOR

...view details