ಕರ್ನಾಟಕ

karnataka

ETV Bharat / sports

ಮೂರು ದಿನಗಳಲ್ಲಿ ಎರಡೆರೆಡು ಹ್ಯಾಟ್ರಿಕ್​... ದೀಪಕ್​ ಚಹಾರ್ ಹ್ಯಾಟ್ರಿಕ್​ ಕಿಂಗ್​! - ಸಯ್ಯದ್​ ಮುಷ್ತಾಕ್​ ಅಲಿಯಲ್ಲಿ ದೀಪಕ್​ ಹ್ಯಾಟ್ರಿಕ್​

ಭಾನುವಾರ ಬಾಂಗ್ಲಾದೇಶದ ವಿರುದ್ಧ ಹ್ಯಾಟ್ರಿಕ್​ ವಿಕೆಟ್​ ಪಡೆದಿದ್ದ ಎರಡನೇ ದಿನದಲ್ಲಿ ದೀಪಕ್​ ಚಹಾರ್​ ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ವಿದರ್ಭ ವಿರುದ್ಧ ಮತ್ತೊಂದು ಹ್ಯಾಟ್ರಿಕ್​ ಸಾಧನೆ ಮಾಡಿದ್ದಾರೆ.

Deepak Chahar hatric

By

Published : Nov 12, 2019, 4:47 PM IST

ತಿರುವನಂತಪುರಂ: ಎರಡು ದಿನಗಳ ಹಿಂದೆಯಷ್ಟೇ ಬಾಂಗ್ಲಾದೇಶದ ವಿರುದ್ಧ ಹ್ಯಾಟ್ರಿಕ್​ ವಿಕೆಟ್​ ಪಡೆದಿದ್ದ ದೀಪಕ್​ ಚಹಾರ್​ ವಿದರ್ಭ ವಿರುದ್ಧ ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ಮತ್ತೆ ಹ್ಯಾಟ್ರಿಕ್​ ಸಾಧನೆ ಮಾಡಿದ್ದಾರೆ.

ಮಳೆ ಕಾರಣ 13 ಓವರ್​ಗಳಿಗೆ ಸೀಮಿತಗೊಳಿಸಿದ್ದ ಪಂದ್ಯದಲ್ಲಿ ದೀಪಕ್​ ಕೊನೆಯ ಓವರ್​ನ ಕೊನೆಯ 3 ಎಸೆತಗಳಲ್ಲಿ ವಿಕೆಟ್​ ಪಡೆಯುವ ಮೂಲಕ ಮೂರು ದಿನಗಳಲ್ಲಿ 2 ಎರಡು ಹ್ಯಾಟ್ರಿಕ್​ ಸಾಧನೆ ಮಾಡಿದ್ದಾರೆ.

ವಿದರ್ಭ ವಿರುದ್ಧ 12 ನೇ ಓವರ್​ನ 4ನೇ ಎಸೆತದಲ್ಲಿ ದರ್ಶನ್​ ನೀಲಕಂಡೆ, 5ನೇ ಎಸೆತದಲ್ಲಿ ಶ್ರೀಕಾಂತ್​ ವಾಘ್​, 6ನೇ ಎಸೆತದಲ್ಲಿ ಅಕ್ಷಯ್ ವಾಡ್ಕರ್​ ವಿಕೆಟ್​ ಪಡೆದರು. ಒಟ್ಟು 3 ಓವರ್​ಗಳಲ್ಲಿ 1 ಮೇಡನ್​ ಸಹಿತ 18 ರನ್​ ನೀಡಿ 4 ವಿಕೆಟ್​ ಪಡೆರಲ್ಲದೇ ವಿದರ್ಭ ತಂಡವನ್ನು 13 ಓವರ್​ಗಳ ಪಂದ್ಯದಲ್ಲಿ 100ರೊಳಗೆ ಕಟ್ಟಿಹಾಕಲು ನೆರವಾದರು.

ಭಾನುವಾರ ಬಾಂಗ್ಲಾದೇಶದ ವಿರುದ್ಧ 7 ರನ್​ ನೀಡಿ 6 ರವಿಕೆಟ್​ ಪಡೆಯುವ ಮೂಲಕ ಟಿ-20 ಇತಿಹಾಸದಲ್ಲಿ ಕಡಿಮೆ ರನ್​ ನೀಡಿ ಹೆಚ್ಚು ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದರು.

ABOUT THE AUTHOR

...view details