ಆಕ್ಲೆಂಡ್ :ಐಸಿಸಿ ಸೋಮವಾರ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಕೂಟವನ್ನು ಕೊರೊನಾ ವೈರಸ್ ಭೀತಿಯಿಂದ ಮುಂದೂಡಿದೆ. ಇದೀಗ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ 2021ರ ಮಹಿಳಾ ಏಕದಿನ ವಿಶ್ವಕಪ್‌ನ ಭವಿಷ್ಯವನ್ನು ಮುಂದಿನ ಎರಡು ವಾರಗಳಲ್ಲಿ ನಿರ್ಧರಿಸಲಾಗುತ್ತದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಗ್ರೇಗ್ ಬಾರ್ಕ್ಲೇ ತಿಳಿಸಿದ್ದಾರೆ.
ಮುಂದಿನ 2 ವಾರಗಳಲ್ಲಿ ವಿಶ್ವಕಪ್ ಕುರಿತ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ವಿಶ್ವಕಪ್ ಮುಂದೂಡುವ ಅವಶ್ಯಕತೆಯಿದೆಯೇ ಅನ್ನೋದನ್ನು ನಾವು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಿದೆ ಎಂದು ಅವರು ಹೇಳಿದ್ದಾರೆ. 'ವಿಶ್ವಕಪ್ ಕುರಿತು ಮುಂದುವರಿಯಬೇಕಾದ್ರೆ, ನಾವು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಯಾಕೆಂದರೆ, ಫೆಬ್ರವರಿಯಲ್ಲಿ ವಿಶ್ವಮಟ್ಟದ ಟೂರ್ನಾಮೆಂಟ್ ನಡೆಸಲು ಸಾಧ್ಯವಿದೆ ಎಂದಾದ್ರೆ, ನಾವು ಅಗತ್ಯವಾದ ಎಲ್ಲಾ ಸಂಪನ್ಮೂಲಗಳನ್ನು ಪಡೆಯಬೇಕಾಗಿರುತ್ತದೆ' ಎಂದಿದ್ದಾರೆ.