ವಿಶಾಖಪಟ್ಟಣಂ: ಆರಂಭಿಕ ಕುಸಿತದ ಬಳಿಕ ಮೂರನೇ ದಿನದಾಟದಲ್ಲಿ ನಿಧಾನವಾಗಿ ರನ್ ಕಲೆ ಹಾಕುತ್ತಿರುವ ದಕ್ಷಿಣ ಆಫ್ರಿಕಾ ಭೋಜನ ವಿರಾಮದ ವೇಳೆಗೆ 4 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿದೆ.
39 ರನ್ನಿಗೆ 3 ವಿಕೆಟ್ ಕಳೆದುಕೊಂಡು ಎರಡನೇ ದಿನದಾಟ ಮುಗಿಸಿದ್ದ ಪ್ರವಾಸಿ ತಂಡ ಇಂದಿನ ಆಟ ಜಾಗರೂಕತೆಯಿಂದ ರನ್ ಕಲೆ ಹಾಕಲು ಮುಂದಾಗಿದೆ. ನೈಟ್ ವಾಚ್ಮನ್ ಆಗಿ ಬಂದಿದ್ದ ತೆಂಬ ಬವುಮಾ 18 ರನ್ ಗಳಿಸಿದ್ದಾಗ ಇಶಾಂತ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು.
ನಂತರದಲ್ಲಿ ಕ್ರೀಸ್ಗೆ ಆಗಮಿಸಿದ ನಾಯಕ ಫಫ್ ಡು ಪ್ಲೆಸಿಸ್ ಆರಂಭಿಕ ಆಟಗಾರ ಡೀನ್ ಎಲ್ಗರ್ ಜೊತೆಗೂಡಿ ರನ್ ಹೆಚ್ಚಿಸುತ್ತಾ ಸಾಗಿದರು. ಒಂದೆಡೆ ಎಲ್ಗರ್(76) ಅರ್ಧಶತಕ ಗಳಿಸಿ ಮುನ್ನುಗ್ಗಿದರೆ, ಪ್ಲೆಸಿಸ್(48) ಅರ್ಧಶತಕ ಸನಿಹ ಬಂದಿದ್ದಾರೆ.
ದಕ್ಷಿಣ ಆಫ್ರಿಕಾ ಇನ್ನೂ 349 ರನ್ಗಳ ಹಿನ್ನಡೆಯಲ್ಲಿದ್ದು, ಕ್ರೀಸ್ನಲ್ಲಿರುವ ಬ್ಯಾಟ್ಸ್ಮನ್ಗಳ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಆತಿಥೇಯರ ಪರ ಆರ್. ಅಶ್ವಿನ್ 2 ಹಾಗೂ ಜಡೇಜಾ, ಇಶಾಂತ್ ತಲಾ ಒಂದೊಂದು ವಿಕೆಟ್ ಕಿತ್ತಿದ್ದಾರೆ.