ಕರ್ನಾಟಕ

karnataka

ETV Bharat / sports

9 ವರ್ಷ 8 ತಿಂಗಳ ಬಳಿಕ ಆಫ್ರಿಕನ್ ಅಟಗಾರನಿಂದ ಭಾರತದ ನೆಲದಲ್ಲಿ ಶತಕ ಸಾಧನೆ..! - ಡೀನ್ ಎಲ್ಗರ್ ಶತಕ

ಡೀನ್ ಎಲ್ಗರ್ 175 ಎಸೆತಗಳಲ್ಲಿ ಮೂರಂಕಿ ಗಡಿ ತಲುಪಿ ಭಾರತದಲ್ಲಿ ಆಫ್ರಿಕನ್ನರ ಒಂಭತ್ತು ವರ್ಷದ ಶತಕದ ಬರ ನೀಗಿಸಿದ್ದಾರೆ. ಎಲ್ಗರ್ ಶತಕದ ಆಟದಲ್ಲಿ 11 ಬೌಂಡರಿ ಹಾಗೂ ನಾಲ್ಕು ಆಕರ್ಷಕ ಸಿಕ್ಸರ್​ಗಳಿದ್ದವು.

ಡೀನ್ ಎಲ್ಗರ್

By

Published : Oct 4, 2019, 1:39 PM IST

ವಿಶಾಖಪಟ್ಟಣಂ:ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಭಾರತದ ಬೃಹತ್ ಮೊತ್ತಕ್ಕೆ ದಿಟ್ಟ ಉತ್ತರ ನೀಡುತ್ತಿದ್ದು, ಆರಂಭಿಕ ಆಟಗಾರ ಡೀನ್ ಎಲ್ಗರ್ ಶತಕದ ನೆರವಿನಿಂದ ಉತ್ತಮ ಸ್ಥಿತಿಯಲ್ಲಿದೆ.

ಡೀನ್ ಎಲ್ಗರ್ 175 ಎಸೆತದಲ್ಲಿ ಮೂರಂಕಿ ಗಡಿ ತಲುಪಿ ಭಾರತದಲ್ಲಿ ಆಫ್ರಿಕನ್ನರ ಒಂಭತ್ತು ವರ್ಷದ ಶತಕದ ಬರ ನೀಗಿಸಿದ್ದಾರೆ. ಎಲ್ಗರ್ ಶತಕದ ಆಟದಲ್ಲಿ ಹನ್ನೊಂದು ಬೌಂಡರಿ ಹಾಗೂ ನಾಲ್ಕು ಆಕರ್ಷಕ ಸಿಕ್ಸರ್​ಗಳಿದ್ದವು.

ಡೀನ್ ಎಲ್ಗರ್

ಶತಕದ ಬರ ನೀಗಿಸಿದ ಎಲ್ಗರ್..!

2010ರಲ್ಲಿ ಹಾಶಿಮ್ ಅಮ್ಲ ಭಾರತದ ನೆಲದಲ್ಲಿ ಟೆಸ್ಟ್ ಶತಕ ಬಾರಿಸಿದ್ದರು. ನಂತರದ ಒಂಭತ್ತು ವರ್ಷದಲ್ಲಿ ಯಾವೊಬ್ಬ ಆಫ್ರಿಕನ್ ಅಟಗಾರನೂ ಮೂರಂಕಿ ಗಡಿ ದಾಟಿರಲಿಲ್ಲ.

2010 ಫೆ.14ರಂದು ಹಾಶಿಮ್ ಆಮ್ಲ ಕೋಲ್ಕತ್ತಾದ ಈಡನ್​ ಗಾರ್ಡನ್​ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅಜೇಯ 123 ರನ್ ಗಳಿಸಿದ್ದರು.

ಸದ್ಯ ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಡೀನ್​ ಎಲ್ಗರ್​ ಶತಕ ಸಿಡಿಸುವ ಮೂಲಕ ಒಂಭತ್ತು ವರ್ಷಗಳ ಶತಕದ ಬರವನ್ನು ನೀಗಿಸಿದ್ದಾರೆ.

ABOUT THE AUTHOR

...view details