ಶಾರ್ಜಾ: ಎಬಿಡಿ ವಿಲಿಯರ್ಸ್ ಅರ್ಧಶತಕ ಹಾಗೂ ಬೌಲರ್ಗಳ ಅದ್ಭುತ ಬೌಲಿಂಗ್ ಪ್ರದರ್ಶನದ ನೆರವಿನಿಂದ ಆರ್ಸಿಬಿ, ಕೋಲ್ಕತ್ತಾ ನೈಟ್ರೈಡರ್ಸ್ ವಿರುದ್ಧ 82 ರನ್ಗಳ ಬೃಹತ್ ಅಂತರದ ಜಯ ಸಾಧಿಸಿದೆ
ಮೊದಲು ಬ್ಯಾಟಿಂಗ್ ನಡೆಸಿದ ಬೆಂಗಳೂರು ತಂಡ ಫಿಂಚ್ 47 , ಪಡಿಕ್ಕಲ್ 32, ಕೊಹ್ಲಿ 33 ಹಾಗೂ ಡಿ ವಿಲಿಯರ್ಸ್ ಅವರ ಅಜೇಯ 73 ರನ್ಗಳ ನೆರವಿನಿಂದ 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 194 ರನ್ಗಳಿಸಿತ್ತು.
195 ರನ್ಗಳ ಗುರಿ ಬೆನ್ನತ್ತಿದ ಕೆಕೆಆರ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 119 ರನ್ಗಳಿಸಿ, 82 ರನ್ಗಳ ಹೀನಾಯ ಸೋಲುಕಂಡಿತು.
ಆರ್ಸಿಬಿ ಬೌಲರ್ಗಳ ಮುಂದೆ ತಿಣುಕಾಡಿದ ಕೆಕೆಆರ್ ಬ್ಯಾಟ್ಸ್ಮನ್ಗಳು ಶುಬ್ಮನ್ ಗಿಲ್ ಹೊರೆತುಪಡಿಸಿದರೆ, ಬೇರೆ ಯಾರು 20 ರ ಗಡಿದಾಟಲಿಲ್ಲ. ಗಿಲ್ 25 ಎಸೆತಗಳಲ್ಲಿ 34 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಇಂದೇ ಮೊದಲ ಪಂದ್ಯವನ್ನಾಡಿದ ಟಾಮ್ ಬಾಂಟನ್ 8 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ನಿತೀಶ್ ರಾಣಾ 9, ಇಯಾನ್ ಮಾರ್ಗನ್ 8, ದಿನೇಶ್ ಕಾರ್ತಿಕ್ 1, ರಸೆಲ್ 16, ತ್ರಿಪಾಠಿ 16, ಪ್ಯಾಟ್ ಕಮಿನ್ಸ್ 1, ನಾಗರಕೋಟಿ 4, ರನ್ಗಳಿಸಿ ಔಟಾದರು.
ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಆರ್ಸಿಬಿ ಪರ ಕ್ರಿಸ್ ಮೋರಿಸ್ 4 ಓವರ್ಗಳಲ್ಲಿ 17 ರನ್ ನೀಡಿ 2 ವಿಕೆಟ್, ವಾಷಿಂಗ್ಟನ್ ಸುಂದರ್ 20 ರನ್ ನೀಡಿ 2 ವಿಕೆಟ್, ಚಹಾಲ್ 4 ಓವರ್ಗಳಲ್ಲಿ ಕೇವಲ 12 ರನ್ ನೀಡಿ 1 ವಿಕೆಟ್, ಸೈನಿ, ಸಿರಾಜ್ ಹಾಗೂ ಉದಾನ ತಲಾ ಒಂದು ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಕೇವಲ 33 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 5 ಬೌಂಡರಿ ಸಹಿತ ಅಜೇಯ 73 ರನ್ಗಳಿಸಿದ ವಿಲಿಯರ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.