ಬೆಂಗಳೂರು:ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಅಂತಿಮ ಟಿ20 ಪಂದ್ಯವನ್ನು ಸುಲಭವಾಗಿ ಗೆಲ್ಲುವ ಮೂಲಕ ಸರಣಿ ಸೋಲಿನಿಂದ ಪಾರಾಗಿದೆ.
ಟೀಂ ಇಂಡಿಯಾ ನೀಡಿದ 135 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಡಿಕಾಕ್ ತಂಡಕ್ಕೆ ಭಾರತದಿಂದ ಯಾವುದೇ ಪ್ರತಿರೋಧ ಎದುರಾಗಲಿಲ್ಲ. ಆರಂಭಿಕ ಆಟಗಾರರು ಮೊದಲ ವಿಕೆಟಿಗೆ 76 ರನ್ ಪೇರಿಸುವ ಮೂಲಕ ಗೆಲುವನ್ನು ಸುಲಭವಾಗಿಸಿದರು.
ನಾಯಕ ಕ್ವಿಂಟನ್ ಡಿಕಾಕ್ 52 ಎಸೆತಕ್ಕೆ 79 ರನ್ ಬಾರಿಸುವ ಮೂಲಕ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ರೀಜಾ ಹೆಂಡ್ರಿಕ್ಸ್ 28 ಹಾಗೂ ತೆಂಬಾ ಬವುಮಾ 27 ರನ್ ಬಾರಿಸಿ ತಂಡದ ಗೆಲುವಿಗೆ ಸಹಕಾರಿಯಾದರು.
16.5 ಓವರ್ನಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ ದಕ್ಷಿಣ ಆಫ್ರಿಕಾ ಗುರಿಮುಟ್ಟಿ ಸರಣಿ ಸಮಬಲ ಸಾಧಿಸಿತು. ಏಕೈಕ ವಿಕೆಟ್ ಹಾರ್ದಿಕ್ ಪಾಂಡ್ಯ ಪಾಲಾಯಿತು.ಪ್ರವಾಸಿ ತಂಡದ ವಿರುದ್ಧ ಟೆಸ್ಟ್ ಸರಣಿ ಅಕ್ಟೋಬರ್ 2ರಿಂದ ಆರಂಭವಾಗಲಿದೆ. ವಿಶಾಖ ಪಟ್ಟಣಂನಲ್ಲಿ ಪಂದ್ಯ ಆಯೋಜನೆಯಾಗಿದೆ. ಟೆಸ್ಟ್ ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾ ತಂಡ ಅಧ್ಯಕ್ಷರ ಇಲೆವೆನ್ ಪರ ಮೂರು ದಿನಗಳ ಅಭ್ಯಾಸ ಪಂದ್ಯವನ್ನಾಡಲಿದೆ. ಸೆ.26ರಂದು ಅಭ್ಯಾಸ ಪಂದ್ಯ ಆರಂಭವಾಗಲಿದೆ.