ಕರ್ನಾಟಕ

karnataka

ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ಗೌತಮ್​ ಗಂಭಿರ್​ ಸ್ಟ್ಯಾಂಡ್ ಅನಾವರಣ

ಗಂಭೀರ್​ ಅವರು ದೇಶಕ್ಕೆ ಎರಡು ವಿಶ್ವಕಪ್​ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಅವರಿಗೆ  ಗೌರವ ಸೂಚಿಸಲು ಜೂನ್‌ನಲ್ಲಿ  ಗಂಭೀರ್‌ ಸ್ಟ್ಯಾಂಡ್‌ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಆದರೆ ಡಿಡಿಸಿಎ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯದ ಕಾರಣದಿಂದ ತಡವಾಗಿತ್ತು. ಇದೀಗ ಇಂದು ಡಿಡಿಸಿಎ ವಿಶ್ವಕಪ್​ ಹೀರೋ ಹೆಸರಿನಲ್ಲಿ ಸ್ಟ್ಯಾಂಡ್​ ಉದ್ಘಾಟನೆ ಮಾಡುವ ಮೂಲಕ ಗೌತಿ ಅಭಿಮಾನಿಗಳಿಗೆ ಖುಷಿ ನೀಡಿದೆ.

By

Published : Nov 26, 2019, 8:10 PM IST

Published : Nov 26, 2019, 8:10 PM IST

ETV Bharat / sports

ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ಗೌತಮ್​ ಗಂಭಿರ್​ ಸ್ಟ್ಯಾಂಡ್ ಅನಾವರಣ

DDCA to inaugurate Gautam Gambhir stand
DDCA to inaugurate Gautam Gambhir stand

ನವದೆಹಲಿ: ಭಾರತ ತಂಡದ ಮಾಜಿ ಆಟಗಾರ ಹಾಗೂ ಹಾಲಿ ಎಂಪಿ ಗೌತಮ್​ ಗಂಭೀರ್ ಹೆಸರನ್ನು ಅರುಣ್‌ ಜೇಟ್ಲಿ ಕ್ರೀಡಾಂಗಣದ ಸ್ಟ್ಯಾಂಡ್‌ವೊಂದಕ್ಕೆ ​ನಾಮಕರಣ ಮಾಡುವ ಮೂಲಕ ಹಿರಿಯ ಕ್ರಿಕೆಟಿಗನಿಗೆ ಡೆಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್‌ ಸಂಸ್ಥೆ ಗೌರವಿಸಿದೆ.

ಭಾರತ ಪರ​ 58 ಟೆಸ್ಟ್ ಹಾಗೂ 147 ಏಕದಿನ ಪಂದ್ಯಗಳನ್ನಾಡಿರುವ ಗೌತಮ್​ ಗಂಭೀರ್ ಕ್ರಮವಾಗಿ 4157 ಹಾಗೂ 5238 ರನ್ ಬಾರಿಸಿದ್ದಾರೆ. ಇನ್ನು 37 ಟಿ-20 ಪಂದ್ಯಗಳನ್ನಾಡಿದ್ದು, 932 ರನ್ ಬಾರಿಸಿದ್ದಾರೆ. ಇದಲ್ಲದೆ 2007ರ ಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಭಾರತ ತಂಡದ ಪರ ಮಹತ್ವದ ಪಾತ್ರ ವಹಿಸಿದ್ದರು.

ಗಂಭೀರ್​ ದೇಶಕ್ಕೆ ಎರಡು ವಿಶ್ವಕಪ್​ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಅವರಿಗೆ ಗೌರವ ಸೂಚಿಸಲು ಜೂನ್‌ನಲ್ಲಿ ಗಂಭೀರ್‌ ಸ್ಟ್ಯಾಂಡ್‌ ಬಗ್ಗೆ ಪ್ರಸ್ತಾಪ ಮಾಡಲಾಗಿತ್ತು. ಆದರೆ ಡಿಡಿಸಿಎ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯದ ಕಾರಣದಿಂದ ತಡವಾಗಿತ್ತು. ಇದೀಗ ಇಂದು ಡಿಡಿಸಿಎ ವಿಶ್ವಕಪ್​ ಹೀರೋ ಹೆಸರಿನಲ್ಲಿ ಸ್ಟ್ಯಾಂಡ್​ ಉದ್ಘಾಟನೆ ಮಾಡುವ ಮೂಲಕ ಗೌತಿ ಅಭಿಮಾನಿಗಳಿಗೆ ಖುಷಿ ನೀಡಿದೆ.

ಈಗಾಗಲೇ ಅರುಣ್ ಜೇಟ್ಲಿ ಮೈದಾನದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಹೆಸರನ್ನು ಕೆಲವು ತಿಂಗಳ ಹಿಂದೆಯಷ್ಟೆ ನಾಮಕರಣ ಮಾಡಲಾಗಿತ್ತು. ಇನ್ನು ಮಾಜಿ ಕ್ರಿಕೆಟಿಗರಾದ ಬಿಷನ್ ಸಿಂಗ್ ಬೇಡಿ, ಮೊಹಿಂದರ್ ಅಮರ್ ನಾಥ್ ಹೆಸರಿನ ಸ್ಟ್ಯಾಂಡ್ ಈ ಹಿಂದೆಯೇ ನಿರ್ಮಾಣವಾಗಿದೆ. ಇದೀಗ ಈ ಪಟ್ಟಿಗೆ ಗೌತಮ್ ಗಂಭೀರ್ ಹೆಸರು ಕೂಡ ಸೇರ್ಪಡೆಯಾಗಿದೆ.

ABOUT THE AUTHOR

...view details