ಕರ್ನಾಟಕ

karnataka

ETV Bharat / sports

ಮಿಂಚಿದ ವಾರ್ನರ್​​​: ಲಂಕಾ ವಿರುದ್ಧದ ಟಿ-20 ಸರಣಿ ಕ್ಲೀನ್​​ ಸ್ವೀಪ್​​​ ಮಾಡಿದ ಕಾಂಗರೂ ಪಡೆ - ಆಸ್ಟ್ರೇಲಿಯಾ ತಂಡ

ಶ್ರೀಲಂಕಾ ವಿರುದ್ಧ ನಡೆದ ಕೊನೆಯ ಟಿ-20 ಪಂದ್ಯದಲ್ಲೂ ಕಾಂಗರೂ ಪಡೆ ಗೆಲುವಿನ ನಗೆ ಬೀರಿದ್ದು, ಈ ಮೂಲಕ ಮೂರು ಟಿ-20 ಪಂದ್ಯಗಳ ಕ್ರಿಕೆಟ್​ ಸರಣಿಯನ್ನು ಕೈವಶ ಮಾಡಿಕೊಂಡಿದೆ.

ಡೇವಿಡ್​ ವಾರ್ನರ್​​

By

Published : Nov 1, 2019, 7:56 PM IST

ಮೆಲ್ಬೋರ್ನ್​​​:ಪಾಕಿಸ್ತಾನಕ್ಕೆ ಟಿ-20 ಕ್ರಿಕೆಟ್​​ನಲ್ಲಿ ಸೋಲಿನ ರುಚಿ ತೋರಿಸಿದ್ದ ಶ್ರೀಲಂಕಾ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದೆ. ಈ ಮೂಲಕ ಮೂರು ಪಂದ್ಯಗಳ ಟಿ-20 ​ ಸರಣಿಯಲ್ಲಿ ಮುಖಭಂಗ ಅನುಭವಿಸಿದೆ.

ಶ್ರೀಲಂಕಾ ವಿರುದ್ಧ ಮೆಲ್ಬರ್ನ್​ ಕ್ರಿಕೆಟ್​ ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಮಾಡಿದ ಲಂಕಾ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 142 ರನ್​ ಗಳಿಸಿತ್ತು. ತಂಡದ ಪರ ವಿಕೆಟ್​ ಕೀಪರ್​ ಕುಸಾಲ್​ ಪೆರೆರಾ 57 ರನ್ ಕಲೆ ಹಾಕಿದ್ರು.

ವಾರ್ನರ್​, ಫಿಂಚ್​​

ನಿಗದಿತ ಗುರಿ ಬೆನ್ನು ಹತ್ತಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆದುಕೊಳ್ತು. ನಾಯಕ ಆ್ಯರೊನ್​ ಫಿಂಚ್​​ 37 ಹಾಗೂ ವಾರ್ನರ್​​ ಅಜೇಯ 57ರನ್​ ಕೂಡಿಸಿ ತಂಡವನ್ನು ಗೆಲುವಿನ ಸನಿಹ ತಂದರು. ಕೊನೆಯದಾಗಿ ತಂಡ 17.4 ಓವರ್​​ಗಳಲ್ಲಿ ಕೇವಲ 3 ವಿಕೆಟ್​ ಕಳೆದುಕೊಂಡು 145ರನ್​ಗಳಿಸಿ ಮಾಡಿ ಜಯಭೇರಿ ಬಾರಿಸಿತು. ಈ ಮೂಲಕ ವಾರ್ನರ್​ ಆಡಿರುವ ಮೂರು ಟಿ-20 ಪಂದ್ಯಗಳಿಂದ ಅಜೇಯರಾಗುಳಿದು 217 ರನ್ ​ಗಳಿಕೆ ಮಾಡಿದರು. ಪಂದ್ಯಶ್ರೇಷ್ಠ ಹಾಗು ಸರಣಿ ಶ್ರೇಷ್ಠ ಎರಡೂ ಪ್ರಶಸ್ತಿಗೆ ಅವರು ಭಾಜನರಾದರು.

ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್​ ಕ್ರಿಕೆಟ್​ ಸರಣಿಗಾಗಿ ವಿಶ್ವದ ಎಲ್ಲಾ ತಂಡಗಳು ಸಜ್ಜುಗೊಳ್ಳುತ್ತಿವೆ. ಇದೀಗ ಆಸ್ಟ್ರೇಲಿಯಾಗೆ ಡೇವಿಡ್​ ವಾರ್ನರ್​ ಹಾಗೂ ಸ್ಟೀವ್​ ಸ್ಮಿತ್​ ಕಮ್​ಬ್ಯಾಕ್ ಮಾಡಿ ತಂಡದ ಆತ್ಮವಿಶ್ವಾಸ ಹಚ್ಚಿಸಿದ್ದಾರೆ.

ABOUT THE AUTHOR

...view details