ಹೈದರಾಬಾದ್:ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ತಮಿಳು ಸೂಪರ್ ಸ್ಟಾರ್ ರಜಿನಿಕಾಂತ್ ಅವರನ್ನು ಅನುಕರಿಸುವ ಮೂಲಕ ಹೊಸ ವರ್ಷದ ಅಭಿಮಾನಿಗಳನ್ನು ಸ್ವಾಗತಿಸಿದರು.
ರಿಫೇಸ್ ಆ್ಯಪ್ ಮೂಲಕ ಸೂಪರ್ ಸ್ಟಾರ್ ರಜನಿಕಾಂತ್ ಅವತಾರ ತಾಳಿರುವ ವಾರ್ನರ್, ಇನ್ಸ್ಟಾಗ್ರಾಮ್ಲ್ಲಿ ತಮಾಷೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ವಿಡಿಯೋ ಪೋಸ್ಟ್ ಮಾಡಿರುವ ವಾರ್ನರ್ "ಬಹು ಜನರ ಒತ್ತಾಯದ ಮೇರೆಗೆ, ಹ್ಯಾಪಿ ನ್ಯೂ ಇಯರ್" ಎಂದು ಬರೆದುಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುವ ವಾರ್ನರ್, ಭಾರತದಲ್ಲಿ ವಿಶೇಷವಾಗಿ ದಕ್ಷಿಣ ರಾಜ್ಯಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
ಈ ಹಿಂದೆ ಟಿಕ್ಟಾಕ್ನಲ್ಲಿ ಸಕ್ರಿಯರಾಗಿದ್ದ ವಾರ್ನರ್, ಭಾರತದಲ್ಲಿ ಟಿಕ್ಟಾಕ್ ಬ್ಯಾನ್ ಆದ ನಂತರ ಇದೀಗ ಹೊಸ ಆ್ಯಪ್ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಗಾಯದ ಕಾರಣದಿಂದಾಗಿ ವಾರ್ನರ್, ಟಿ -20 ಸರಣಿ ಮತ್ತು ಭಾರತ ವಿರುದ್ಧದ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದರು. ಇದೀಗ ಸಿಡ್ನಿ ಟೆಸ್ಟ್ ಪಂದ್ಯಕ್ಕೆ ತಂಡ ಸೇರಿಕೊಂಡಿದ್ದು, ಆಸೀಸ್ ಬಲ ಹೆಚ್ಚಾಗಿದೆ.