ಹೈದರಾಬಾದ್:ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಆ್ಯಶಸ್ ಟೆಸ್ಟ್ ಸರಣಿ ಕ್ರಿಕೆಟ್ ಲೋಕದಲ್ಲೇ ಅತ್ಯಂತ ಮಹತ್ವದ ಸರಣಿ ಎಂದೇ ಪರಿಗಣಿತವಾಗಿದೆ. ಬೇರಾವುದೇ ಸಿರೀಸ್ನಲ್ಲಾದರೂ ಫೇಲ್ ಆಗಿದ್ದ ಆಟಗಾರನೂ ಆ್ಯಶಸ್ನಲ್ಲಿ ಪುಟಿದೇಳುತ್ತಾನೆ. ಇದೇ ಈ ಸರಣಿಯ ವಿಶೇಷತೆ. ಆದರೆ ಆಸೀಸ್ನ ನಂಬಿಕಸ್ಥ ಹಾಗೂ ಸ್ಫೋಟಕ ಆಟಗಾರ ವರ್ಷಪೂರ್ತಿ ಬ್ಯಾಟಿಂಗ್ನಲ್ಲಿ ಅಬ್ಬರಿಸಿದ್ದರೂ ಆ್ಯಶಸ್ನಲ್ಲಿ ಸಂಪೂರ್ಣ ಫೇಲ್ ಆಗಿದ್ದಾನೆ.
ಆ್ಶಶಸ್ ಟೆಸ್ಟ್ ಸರಣಿ: ವಿಶ್ವದಾಖಲೆ ಮಿಸ್ ಮಾಡಿಕೊಂಡ್ರು ಸ್ಟಿವ್ ಸ್ಮಿತ್!
ಚೆಂಡು ವಿರೂಪ ಪ್ರಕರಣದಲ್ಲಿ ಒಂದು ವರ್ಷದ ನಿಷೇಧ ಶಿಕ್ಷೆ ಮುಗಿಸಿ ಬಂದಿದ್ದ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಕ್ರಿಕೆಟ್ನಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸಿದ್ದರು. ವಾರ್ನರ್ ಐಪಿಎಲ್ನಲ್ಲಿ ಅಕ್ಷರಶಃ ಅಬ್ಬರಿಸಿ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದರು. ಐಪಿಎಲ್ ಹಾಗೂ ವಿಶ್ವಕಪ್ ಮುಕ್ತಾಯದ ಬಳಿಕ ವಾರ್ನರ್ಗೆ ಎದುರಾದ ಮಹತ್ವದ ಸರಣಿಯೆಂದರೆ ಅದು ಆ್ಯಶಸ್.
ಒಂದೆಡೆ ವಾರ್ನರ್ ಜೊತೆಗೆ ನಿಷೇಧದ ಶಿಕ್ಷೆ ಅನುಭವಿಸಿದ್ದ ಸ್ಟೀವ್ ಸ್ಮಿತ್ ಆ್ಯಶಸ್ನಲ್ಲಿ ರನ್ಹೊಳೆಯನ್ನೇ ಹರಿಸಿದ್ದರೆ ಅತ್ತ ಸ್ಫೋಟಕ ಆಟಕ್ಕೆ ಹೆಸರಾದ ವಾರ್ನರ್ ಮಾತ್ರ ರನ್ ಗಳಿಸಲು ಒದ್ದಾಡುತ್ತಿದ್ದಿದ್ದು ಸ್ಪಷ್ಟವಾಗಿತ್ತು.
ಆ್ಯಶಸ್ ಸರಣಿಯ 10 ಇನ್ನಿಂಗ್ಸ್ಗಳಲ್ಲಿ 7 ಬಾರಿ ಒಬ್ಬ ಬೌಲರ್ಗೆ ವಿಕೆಟ್ ಒಪ್ಪಿಸಿದ ಡೇವಿಡ್ ವಾರ್ನರ್!
ಆ್ಯಶಸ್ ಸರಣಿಯ ಐದೂ ಪಂದ್ಯ (ಹತ್ತು ಇನ್ನಿಂಗ್ಸ್) ಆಡಿದ ಡೇವಿಡ್ ವಾರ್ನರ್ ಒಟ್ಟಾರೆ ಗಳಿಸಿದ್ದು ಕೇವಲ 95 ರನ್ ಮಾತ್ರ..! ಆ್ಯಶಸ್ ಸರಣಿಯ ಹೀರೋ ಸ್ಟೀವ್ ಸ್ಮಿತ್ ಏಳೇ ಇನ್ನಿಂಗ್ಸ್ನಲ್ಲಿ ಬರೋಬ್ಬರಿ 774 ರನ್ ಕಲೆ ಹಾಕಿದ್ದಾರೆ.