ನವದೆಹಲಿ:ವೆಸ್ಟ್ ಇಂಡೀಸ್ ಆಟಗಾರ ಡ್ಯಾರೆನ್ ಸ್ಯಾಮಿ ಅವರು ಒಬ್ಬ ಹುಡುಗನೊಂದಿಗೆ ಆಸಕ್ತಿದಾಯಕ ಸಂಭಾಷಣೆ ನಡೆಸಿದ್ದು, ವರ್ಣಭೇದ ನೀತಿಯ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಮಾರ್ಗಗಳ ಕುರಿತು ಚಿಂತಿಸಿದ್ದಾರೆ.
ಈ ಕುರಿತು ಸ್ಯಾಮಿ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. "ನಾನು ಒಬ್ಬ ವ್ಯಕ್ತಿಯೊಂದಿಗೆ ಆಸಕ್ತಿದಾಯಕ ಸಂಭಾಷಣೆ ನಡೆಸಿದ್ದೇನೆ. ಈ ವೇಳೆ, ನಕಾರಾತ್ಮಕ ವಿಷಯಗಳ ಹೊರತಾಗಿ ಜನರಿಗೆ ವರ್ಣಭೇದ ನೀತಿಯ ಬಗ್ಗೆ ಶಿಕ್ಷಣ ನೀಡುವ ಕುರಿತಾಗಿ ಮಾತನಾಡಿದ್ದೇವೆ ಎಂದು ಹೇಳಿದ್ದಾರೆ.
2014ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನೊಂದಿಗಿನ ಒಪ್ಪಂದದ ಸಮಯದಲ್ಲಿ ಸ್ಯಾಮಿ ವರ್ಣಭೇದ ನೀತಿಯನ್ನು ಅನುಭವಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈ ಬಳಿಕ ಕ್ರಿಕೆಟ್‌ನಲ್ಲಿ ವರ್ಣಭೇದ ನೀತಿಯ ಕುರಿತಾದ ಚರ್ಚೆ ಪ್ರಾರಂಭವಾಯಿತು. ಅಷ್ಟೇ ಅಲ್ಲದೆ, 'ಕಲು' ಎಂಬ ಪದದ ಅರ್ಥ ತಿಳಿದ ಬಳಿಕ ತಾಳ್ಮೆ ಕಳೆದುಕೊಂಡಿದ್ದರಂತೆ. ಈ ಹಿಂದೆ ಸ್ಯಾಮಿ, ಸನ್‌ರೈಸರ್ಸ್ ಶಿಬಿರದೊಳಗೆ ತಮ್ಮ ವಿರುದ್ಧದ ಜನಾಂಗೀಯ ಧೋರಣೆಯನ್ನು ಮಾಡಲಾಗಿದೆ ಎಂಬ ವಿಡಿಯೋ ಬಿಡುಗಡೆ ಮಾಡಿದ್ದರು.
"ನಾನು ಪ್ರಪಂಚದಾದ್ಯಂತ ಆಡಿದ್ದೇನೆ ಮತ್ತು ನಾನು ಅನೇಕ ಜನರಿಂದ ಪ್ರೀತಿಸಲ್ಪಟ್ಟಿದ್ದೇನೆ. ಆದ್ದರಿಂದ ಹಸನ್ ಮಿನ್ಹಾಜ್ ಅವರ ಸಂಸ್ಕೃತಿಯ ಕೆಲವು ಜನರು ಕಪ್ಪು ಜನರನ್ನು ಹೇಗೆ ವಿವರಿಸುತ್ತಾರೆ ಎಂಬುದನ್ನು ನಾನು ಕೇಳುತ್ತಿದ್ದೆ " ಎಂದು ಸ್ಯಾಮಿ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.
"ಇದು ಎಲ್ಲ ಜನರಿಗೆ ಅನ್ವಯಿಸುವುದಿಲ್ಲ. ನಾನು 'ಕಲು' ಎಂಬ ಪದದ ಅರ್ಥವನ್ನು ಕಂಡುಕೊಂಡ ನಂತರ ಕೋಪಗೊಂಡಿದ್ದೇನೆ ಮತ್ತು ಅದು ಅವಮಾನಕರವಾಗಿದೆ ಎಂದು ನಾನು ಹೇಳಿದ್ದೆ. ನಾನು ಸನ್‌ರೈಸರ್ಸ್ ಹೈದರಾಬಾದ್‌ಗಾಗಿ ಆಡಿದ ಸಂದರ್ಭದಲ್ಲಿ, ನಾನು ಯಾವ ಪದವನ್ನು ಇಷ್ಟಪಡುವುದಿಲ್ಲವೋ ಅದೇ ಪದದಿಂದ ನನ್ನನ್ನು ಕರೆಯಲಾಗುತ್ತಿತ್ತು. ಆ ಸಮಯದಲ್ಲಿ ನನ್ನನ್ನು ಆ ಪದದಿಂದ ಕರೆಯುವಾಗ ನಾನು ಒಪ್ಪಿಕೊಳ್ಳುತ್ತಿದೆ. ಏಕೆಂದರೆ ನನಗೆ ಆ ಪದದ ಬಗ್ಗೆ ತಿಳಿದಿರಲಿಲ್ಲ. ಆಗ ಅವರೆಲ್ಲ ಕರೆದಾಗ ನಾನು ನಗುತ್ತಿದೆ. ತಂಡದ ಸದಸ್ಯರೂ ನಗುತ್ತಿದ್ದರು. ನಾನು ತಮಾಷೆಯಾಗಿರಬೇಕು ಎಂದುಕೊಂಡಿದ್ದೆ ಎಂದಿದ್ದಾರೆ.
ಸದ್ಯ ಜಾರ್ಜ್ ಫ್ಲಾಯ್ಡ್ ಎಂಬ ಆಫ್ರಿಕನ್ - ಅಮೆರಿಕನ್ ವ್ಯಕ್ತಿಯ ಸಾವಿನ ಬಗ್ಗೆ ಯುಎಸ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಸ್ಯಾಮಿ ಬೆಂಬಲ ನೀಡಿದ್ದಾರೆ.