ಹೈದರಾಬಾದ್: ಜುಲೈ 8ರಿಂದ ಇಂಗ್ಲೆಂಡ್-ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಗಳ ನಡುವೆ ಮೂರು ಟೆಸ್ಟ್ ಪಂದ್ಯಗಳ ಕ್ರಿಕೆಟ್ ಸರಣಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ಎಲ್ಲ ರೀತಿಯ ತಯಾರಿ ನಡೆಸಿಕೊಳ್ಳಲಾಗಿದೆ. ಇದರ ಮಧ್ಯೆ ವೆಸ್ಟ್ ಇಂಡೀಸ್ನ ಕೆಲ ಪ್ಲೇಯರ್ಸ್ ಟೂರ್ನಿಯಲ್ಲಿ ಭಾಗಿಯಾಗಲು ಹಿಂದೇಟು ಹಾಕುತ್ತಿದ್ದಾರೆ.
ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಪ್ಲೇಯರ್ಸ್ಗಳಾದ ಡ್ಯಾರೆನ್ ಬ್ರಾವೋ, ಶಿಮ್ರಾನ್ ಹೆಟ್ಮಾಯರ್ ಹಾಗೂ ಕೆಮೋ ಪೌಲ್ ತಂಡದೊಂದಿಗೆ ಇಂಗ್ಲೆಂಡ್ ಪ್ರಯಾಣ ಬೆಳೆಸಲು ಹಿಂದೇಟು ಹಾಕಿದ್ದಾರೆ.
ವೆಸ್ಟ್ ಇಂಡೀಸ್ ಪ್ಲೇಯರ್ಸ್ ಕೋವಿಡ್ ನಂತ್ರ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್... ಜುಲೈನಲ್ಲಿ ಇಂಗ್ಲೆಂಡ್-ವೆಸ್ಟ್ ಇಂಡೀಸ್ ಫೈಟ್!
ಇಂಗ್ಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಗಾಗಿ 14 ಸದಸ್ಯರನ್ನೊಳಗೊಂಡ ತಂಡವನ್ನ ವೆಸ್ಟ್ ಇಂಡೀಸ್ ಪ್ರಕಟಗೊಳಿಸಿದ್ದು, ಇದರಲ್ಲಿ ಈ ಪ್ಲೇಯರ್ಸ್ ಹೆಸರಿದೆ. ಆದರೆ ಇದೀಗ ಪ್ರಯಾಣ ಬೆಳೆಸಲು ಇವರು ಹಿಂದೇಟು ಹಾಕಿದ್ದು, ಇವರ ನಿರ್ಧಾರಕ್ಕೆ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಕೂಡ ಸಮ್ಮತಿ ಸೂಚಿಸಿದೆ.
ತಂಡ ಇಂತಿದೆ:ಜೇಸನ್ ಹೋಲ್ಡರ್, ಬ್ರಾಥ್‌ವೈಟ್, ಶೈ ಹೋಪ್, ಶೇನ್ ಡೌರಿಚ್, ರೋಸ್ಟನ್ ಚೇಸ್, ಶೆಮರ್ ಬ್ರೂಕ್ಸ್, ರಹಕೀಮ್ ಕಾರ್ನ್‌ವಾಲ್, ಎನ್‌ಕ್ರುಮಾ ಬೊನ್ನರ್, ಅಲ್ಜಾರಿ ಜೋಸೆಫ್, ಚೆಮರ್ ಹೋಲ್ಡರ್, ಜಾನ್ ಕ್ಯಾಂಪ್‌ಬೆಲ್, ರೇಮನ್ ರೀಫರ್, ಕೆಮರ್ ರೋಚ್, ಜೆರ್ಮೈನ್ ಬ್ಲ್ಯಾಕ್‌ವುಡ್.
ಮೀಸಲು ಪ್ಲೇಯರ್ಸ್: ಸುನಿಲ್ ಆಂಬ್ರಿಸ್, ಜೋಶುವಾ ಡಾ ಸಿಲ್ವಾ, ಶಾನನ್ ಗೇಬ್ರಿಯಲ್, ಕಿಯಾನ್ ಹಾರ್ಡಿಂಗ್, ಕೈಲ್ ಮೇಯರ್ಸ್, ಪ್ರೆಸ್ಟನ್ ಮೆಕ್‌ಸ್ವೀನ್, ಮಾರ್ಕ್ವಿನೊ ಮೈಂಡ್ಲೆ, ಶೇನ್ ಮೊಸ್ಲೆ, ಆಂಡರ್ಸನ್ ಫಿಲಿಪ್, ಓಶೇನ್ ಥಾಮಸ್, ಜೋಮೆಲ್ ವಾರ್ರಿಕನ್.
ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಇಂಗ್ಲೆಂಡ್ಗೆ ಜೂನ್ 9ರಂದು ಪ್ರಯಾಣ ಬೆಳೆಸಲಿದ್ದು, ಜುಲೈ 8ರಿಂದ ಮುಚ್ಚಿದ ಮೈದಾನದಲ್ಲಿ ಮೂರು ಟೆಸ್ಟ್ ಪಂದ್ಯಗಳು ನಡೆಯಲಿವೆ.