ಕರ್ನಾಟಕ

karnataka

ETV Bharat / sports

ಪ್ರಥಮ ದರ್ಜೆ ಕ್ರಿಕೆಟ್​​ನಲ್ಲಿ ಆಡುವುದಕ್ಕೆ ಅನುಮತಿ ನೀಡುವಂತೆ ಪಿಸಿಬಿಗೆ ದಾನೀಸ್​ ಕನೆರಿಯಾ ಪತ್ರ - ಪಿಸಿಬಿ

ದಾನೀಸ್​ ಕನೇರಿಯಾ ಪಾಕಿಸ್ತಾನ ಪರ 61 ಟೆಸ್ಟ್​ ನಿಂದ 261 ವಿಕೆಟ್ ಪಡೆದಿದ್ದಾರೆ​ ಹಾಗೂ 18 ಏಕದಿನ ಪಂದ್ಯಗಳಿಂದ 15 ವಿಕೆಟ್​ ಪಡೆದಿದ್ದಾರೆ. ಕನೇರಿಯಾ 2009ರಲ್ಲಿ ಸ್ಪಾಟ್​ ಫಿಕ್ಸಿಂಗ್​ನಲ್ಲಿ ಸಿಲುಕಿದ್ದರು. ತಮ್ಮ ಮಾಜಿ ಸಹ ಆಟಗಾರ ಮರ್ವಿನ್​ ವಿರುದ್ಧ ಓವರ್​ಗೆ 12 ರನ್​ ಬಿಟ್ಟುಕೊಡುವುದಾಗಿ ಫಿಕ್ಸಿಂಗ್​ ಮಾಡಿಕೊಂಡು ಸಿಕ್ಕಿಬಿದ್ದಿದ್ದರು.

ದಾನೀಸ್​ ಕನೆರಿಯಾ
ದಾನೀಸ್​ ಕನೆರಿಯಾ

By

Published : Jun 15, 2020, 9:06 AM IST

ನವದೆಹಲಿ: ಪಾಕಿಸ್ತಾನ ಕ್ರಿಕೆಟರ್​ ದಾನೀಶ್​ ಕನೆರಿಯಾ ಪ್ರಥಮ ದರ್ಜೆ ಕ್ರಿಕೆಟ್​ ಆಡಲು ಅನುಮತಿ ನೀಡುವಂತೆ ಪಿಸಿಬಿಗೆ ಮನವಿ ಮಾಡಿದ್ದಾರೆ.

ಕನೇರಿಯಾ ಇಂಗ್ಲೆಂಡ್​ ಕ್ರಿಕೆಟ್​ ಕ್ಲಬ್​ ಪರ ಆಡುವಾಗ ಸ್ಪಾಟ್​ ಫಿಕ್ಸಿಂಗ್​ನಲ್ಲಿ ಪಾಲ್ಗೊಂಡು ಕ್ರಿಕೆಟ್​ನಿಂದ ನಿಷೇಧವಾಗಿದ್ದಕ್ಕೆ ಕನೆರಿಯಾ ವಿಷಾದ ವ್ಯಕ್ತಪಡಿಸಿದ್ದಾರೆ.

ದೇಶಿ ಕ್ರಿಕೆಟ್​ನಲ್ಲಿ ಆಡಲು ಅನುಮನಿ ನೀಡುವಂತೆ ಪಿಸಿಬಿಗೆ ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕದ ಅಧ್ಯಕ್ಷರಿಗೆ ಪತ್ರ ಬರೆಯುವಂತೆ ಕನೇರಿಯಾ ತಮ್ಮ ಕಾನೂನು ತಂಡದ ಮೂಲಕ ಮನವಿ ಮಾಡಿರುವ ಪತ್ರವನ್ನು ಟ್ವಿಟ್ಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಪಿಸಿಬಿ ಅಧ್ಯಕ್ಷ ಎಹ್ಸಾನ್​ ಮಣಿಗೆ ಬರೆದ ಪತ್ರದಲ್ಲಿ, ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ಸಹಿಸಲಾಗದ ಕಷ್ಟಗಳನ್ನು ಅನುಭವಿಸಿದ್ದೇನೆ. ಇದರಿಂದ ತಮ್ಮ ಏಕೈಕ ಆದಾಯದ ಮೂಲದ ಮೇಲೆ ಪರಿಣಾಮ ಬೀರಿದೆ ಎಂದು ಉಲ್ಲೇಖಿಸಿದ್ದಾರೆ.

ದಾನೀಸ್​ ಕನೆರಿಯಾ

ಎಸಿಯುಗೆ ಪತ್ರ ಬರೆಯುವ ಅಧಿಕಾರ ಪಿಸಿಬಿಗೆ ಇದೆ. ನಮ್ಮ ಕ್ಲೈಂಟ್​ನ ಮನವಿ ಮೇರೆಗೆ ದೇಶೀಯ ಕ್ರಿಕೆಟ್​ನಲ್ಲಿ ಆಡಲು ಮತ್ತು ಭಾಗವಹಿಸಲು ಅನುಮತಿ ನೀಡುವಂತೆ ಕೋರಲಾಗಿದೆ.

ದಾನೀಸ್​ ಕನೇರಿಯಾ ಪಾಕಿಸ್ತಾನ ಪರ 61 ಟೆಸ್ಟ್​ ನಿಂದ 261 ವಿಕೆಟ್ ಪಡೆದಿದ್ದಾರೆ​ ಹಾಗೂ 18 ಏಕದಿನ ಪಂದ್ಯಗಳಿಂದ 15 ವಿಕೆಟ್​ ಪಡೆದಿದ್ದಾರೆ. ಕನೇರಿಯಾ 2009ರಲ್ಲಿ ಸ್ಪಾಟ್​ ಫಿಕ್ಸಿಂಗ್​ನಲ್ಲಿ ಸಿಲುಕಿದ್ದರು. ತಮ್ಮ ಮಾಜಿ ಸಹ ಆಟಗಾರ ಮರ್ವಿನ್​ ವಿರುದ್ಧ ಓವರ್​ಗೆ 12 ರನ್​ ಬಿಟ್ಟುಕೊಡುವುದಾಗಿ ಫಿಕ್ಸಿಂಗ್​ ಮಾಡಿಕೊಂಡು ಸಿಕ್ಕಿಬಿದ್ದಿದ್ದರು.

ABOUT THE AUTHOR

...view details