ಡರ್ಬನ್(ದಕ್ಷಿಣ ಆಫ್ರಿಕಾ) : ದಕ್ಷಿಣ ಆಫ್ರಿಕಾದ ವೇಗಿ ಡೇಲ್ ಸ್ಟೈನ್ ಟೆಸ್ಟ್ ಕ್ರಿಕೆಟ್ನಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ. ಕೇವಲ 92 ಟೆಸ್ಟ್ ಪಂದ್ಯಗಳನ್ನಾಡಿರುವ ಸ್ಟೈನ್ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರ ದಾಖಲೆ ಮುರಿದಿದ್ದಾರೆ.
ಡರ್ಬನ್ನಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 4 ವಿಕೆಟ್ ಪಡೆದ ಸ್ಟೈನ್ ಟೆಸ್ಟ್ನಲ್ಲಿ ಒಟ್ಟು 437 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಕಪಿಲ್ ದೇವ್ ಅವರ 434 ವಿಕೆಟ್ಗಳ ದಾಖಲೆ ಬ್ರೇಕ್ ಮಾಡಿದ್ದಾರೆ. ಕಪಿಲ್ ದೇವ್ 131 ಟೆಸ್ಟ್ಗಳಲ್ಲಿ ಈ ಸಾಧನೆ ಮಾಡಿದ್ದರು.
ಟೆಸ್ಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಸ್ಟೈನ್ 7 ನೇ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡಿನ ವೇಗಿ ಸ್ಟುವರ್ಟ್ ಬ್ರಾಡ್ ಕೂಡ 437 ವಿಕೆಟ್ ಪಡೆದುಕೊಂಡಿದ್ದು ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಜಂಟಿಯಾಗಿ 7 ನೇ ಸ್ಥಾನ ಪಡೆದುಕೊಂಡಿದ್ದಾರೆ. ದ.ಆಫ್ರಿಕಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಕೂಡ ಸ್ಟೈನ್ ಹೆಸರಿನಲ್ಲಿಯೇ ಇದೆ.
ಟೆಸ್ಟ್ನಲ್ಲಿ ಅತಿಹೆಚ್ಚು ವಿಕೆಟ್ ಪಡೆದವರು:
ಮುತ್ತಯ್ಯ ಮುರಳಿಧರನ್ 800 ವಿಕೆಟ್
ಶೇನ್ ವಾರ್ನ್ 708 ವಿಕೆಟ್
ಅನಿಲ್ ಕುಂಬ್ಳೆ 619 ವಿಕೆಟ್
ಜೇಮ್ಸ್ ಆಂಡರ್ಸನ್ 575 ವಿಕೆಟ್
ಗ್ಲೆನ್ ಮೆಗ್ರಾತ್ 563 ವಿಕೆಟ್
ಕೌರ್ಟ್ನಿ ವಾಲ್ಷ್ 519 ವಿಕೆಟ್
ಡೇಲ್ಸ್ಟೈನ್ 437 ವಿಕೆಟ್
ಸ್ಟುವರ್ಟ್ ಬ್ರಾಡ್ 437 ವಿಕೆಟ್
ಕಪಿಲ್ ದೇವ್ 434 ವಿಕೆಟ್