ಹ್ಯಾಮಿಲ್ಟನ್ (ನ್ಯೂಜಿಲ್ಯಾಂಡ್): ಈಗಾಗಲೇ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ 20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿರುವ ಭಾರತ ಕ್ರಿಕೆಟ್ ತಂಡ ಈ ವರ್ಷದ ಅಕ್ಟೋಬರ್ - ನವೆಂಬರ್ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 2020ಗೆ ಅತ್ಯುತ್ತಮ ತಂಡವನ್ನು ಸಂಯೋಜಿಸುವಲ್ಲಿ ಕಾರ್ಯನಿರತವಾಗಿದೆ.
ಕಾಂಗರೂ ಪಡೆಯ ಬೆವರಿಳಿಸಲು ಟೀಮ್ ಇಂಡಿಯಾ ಗೇಮ್ ಪ್ಲಾನ್ ರೂಪಿಸುವತ್ತ ಗಮನಹರಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಟೀಮ್ ಇಂಡಿಯಾ ಬ್ಯಾಟಿಂಗ್ ತರಬೇತುದಾರ ವಿಕ್ರಮ್ ರಾಥೋಡ್, ಕಿವೀಸ್ ಬಗ್ಗುಬಡಿಯಲು ವಿಭಿನ್ನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಅವಶ್ಯಕತೆ ಇದೆ. ಆದ್ರೆ ಒಂದು ಫಾರ್ಮೆಟ್ನಿಂದ ಇನ್ನೊಂದು ಫಾರ್ಮೆಟ್ಗೆ ತಕ್ಷಣ ಹೊಂದಾಣಿಕೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ನಮ್ಮ ತಂಡ ಹೊಂದಿರುವುದೇ ನಮಗಿರುವ ದೊಡ್ಡ ಶಕ್ತಿ ಎಂದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ರಾಥೋಡ್ ಆಟಗಾರನ ಮೈಂಡ್ಸೆಟ್ ಹಾಗೂ ಗೇಮ್ಪ್ಲಾನ್ ಮೇಲೆ ಟೀಮ್ ಇಂಡಿಯಾದ ಉತ್ತಮ ಫರ್ಫಾಮೆನ್ಸ್ ಅವಲಂಬಿತವಾಗಿದೆ . ಒಬ್ಬ ತರಬೇತಿಗಾರನಾಗಿ ನಾನು ನಮ್ಮ ಟೀಮ್ ಆಟಗಾರರಿಗೆ ಹೆಚ್ಚೇನೂ ಹೇಳುವ ಅವಶ್ಯಕತೆ ಇಲ್ಲ. ಏಕೆಂದರೆ ಎಲ್ಲರೂ ಉತ್ತಮ ಫಾರ್ಮ್ ಹೊಂದಿದ್ದು, ಅವರದೇ ಆದ ಕ್ರಮಾಂಕದಲ್ಲಿ ಬ್ಯಾಟಿಂಗ್ ಚಳಕ ತೋರಲಿದ್ದಾರೆ ಎಂದ್ರು. ಅದೂ ಅಲ್ಲದೇ ನಮ್ಮ ತಲೆಮಾರಿನ ಕ್ರಿಕೆಟರ್ಸ್ಗಿಂತ ಈಗಿನ ಟೀಮ್ ಫಿಟ್ ಅಂಡ್ ಸ್ಟ್ರಾಂಗ್ ಆಗಿದೆ ಎಂದು ವಿಕ್ರಮ್ ತಮ್ಮ ಟೀಮ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿರಾಯಾಸವಾಗಿ ಸಿಕ್ಸ್ ಬಾರಿಸುವುದರಲ್ಲೇ ನಮಗಿಂತ ಅವರೆಷ್ಟು ಸ್ಟ್ರಾಂಗ್ ಅಂತ ಗಮನಿಸಬಹುದು ಎಂದ್ರು.
ಐದು ಸರಣಿಗಳುಳ್ಳ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ನಿರೂಪಿಸಲು ಬ್ಲೂ ಬಾಯ್ಸ್ ಈಗಾಗಲೇ ಹ್ಯಾಮಿಲ್ಟನ್ಗೆ ಪ್ರಯಾಣ ಬೆಳೆಸಿದ್ದಾರೆ. ಇನ್ನುಈ ಮೈದಾನ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಇದರಿಂದ ಆಡಲು ಕಷ್ಟವಾಗುವುದಿಲ್ಲ. ಆದ್ರೆ ಬೌಲರ್ಸ್ಗಳು ಸ್ವಲ್ಪ ಕಷ್ಟ ಪಡಬೇಕಾಗುತ್ತದೆ. ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾಗುತ್ತೆ ಎಂದ್ರು.
ಉತ್ತಮವಾಗಿ ಆಟವಾಡಲು ಗೇಮ್ ಪ್ಲಾನ್ ರೂಪಿಸುವುದು ಮೈದಾನದ ಪರಿಸ್ಥಿತಿ ಹಾಗೂ ಆಟಗಾರರ ಮನಸ್ಥಿತಿಯನ್ನು ಅವಲಂಬಿಸಿದೆ. ಪರಿಸ್ಥಿತಿಗಳು ಮತ್ತು ಅದಕ್ಕೆ ಅನುಗುಣವಾಗಿ ಬ್ಯಾಟಿಂಗ್ ಮಾಡಬೇಕಾಗುತ್ತದೆ ಎಂದ್ರು. ಇಂಡಿಯಾ ಟೀಮ್ ಈ ವಿಚಾರದಲ್ಲಿ ಬಲಿಷ್ಠವಾಗಿದ್ದು, ಒಂದು ವೇಳೆ ಆಸ್ಟ್ರೇಲಿಯಾದಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಿದರೂ ಪರಿಸ್ಥಿತಿಗೆ ಹೊಂದಿಕೊಂಡು ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ತೋರುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ರು.