ಕರ್ನಾಟಕ

karnataka

ETV Bharat / sports

ಬಾಕ್ಸಿಂಗ್​ ಡೇ ಟೆಸ್ಟ್ ಪಂದ್ಯಕ್ಕೆ ಮೆಲ್ಬೋರ್ನ್​ನಂತಹ ಪಿಚ್ ಬೇಕು: ಕಮ್ಮಿನ್ಸ್​​ - ಭಾರತ vs ಆಸ್ಟ್ರೇಲಿಯಾ ಟೆಸ್ಟ್

ಕೇವಲ ಆಟಗಾರನಾಗಿ ಮಾತ್ರವಲ್ಲ, ಅಭಿಮಾನಿಯಾಗಿಯೂ ಬ್ಯಾಟ್ ಮತ್ತು ಚೆಂಡಿನ ನಡುವಿನ ಕಾಳಗವನ್ನು ನೋಡಲು ಇಷ್ಟಪಡುತ್ತೇನೆ ಎಂದು ಆಸ್ಟ್ರೇಲಿಯಾ ಟೆಸ್ಟ್ ತಂಡದ ಉಪನಾಯಕ ಪ್ಯಾಟ್ ಕಮ್ಮಿನ್ಸ್ ಹೇಳಿದ್ದಾರೆ.

Cummins wants sporting MCG pitch
ಪ್ಯಾಟ್ ಕಮ್ಮಿನ್ಸ್

By

Published : Dec 20, 2020, 3:36 PM IST

ಅಡಿಲೇಡ್: ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ಉತ್ತಮ ಪ್ರದರ್ಶನ ತೋರಿದ್ದ ವೇಗಿ ಪ್ಯಾಟ್ ಕಮ್ಮಿನ್ಸ್​ ಉತ್ಸಾಹಭರಿತ ಟ್ರ್ಯಾಕ್ ಆಟಗಾರರಿಗೆ ನೀಡುವ ಸಹಾಯವನ್ನು ಒಪ್ಪಿಕೊಂಡಿದ್ದಾರೆ ಮತ್ತು ಮೆಲ್ಬೋರ್ನ್‌ನಲ್ಲಿ ನಡೆಯುವ ಬಾಕ್ಸಿಂಗ್ ಡೇ ಟೆಸ್ಟ್‌ಗೆ ಇದೇ ರೀತಿಯ "ಕ್ರೀಡಾ" ಪಿಚ್ ಬಯಸುತ್ತಿದ್ದಾರೆ.

"ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧದ ಸರಣಿ ವೇಳೆ ಪಿಚ್​ಗಳು ಚೆಂಡಿನ ವೇಗ ಮತ್ತು ಬೌನ್ಸ್​ಗೆ ಸಹಾಯಕವಾಗಿದ್ದವು. ಈ ವರ್ಷ ಕೂಡ ಅದೇ ರೀತಿಯ ಪಿಚ್​ಗಳು ಕಂಡುಬರುತ್ತಿವೆ. ಕೇವಲ ಆಟಗಾರನಾಗಿ ಮಾತ್ರವಲ್ಲ, ಅಭಿಮಾನಿಯಾಗಿಯೂ ಬ್ಯಾಟ್ ಮತ್ತು ಚೆಂಡಿನ ನಡುವಿನ ಕಾಳಗವನ್ನು ನೋಡಲು ಇಷ್ಟಪಡುತ್ತೇನೆ. ಆಗ ನಿಮ್ಮ ಕೌಶಲ್ಯವನ್ನು ತೋರಿಸಬಹುದು, ಆ ಮೂಲಕ ನೀವು ಆಟದ ಮೇಲೆ ದೊಡ್ಡ ಪರಿಣಾಮ ಬೀರಬಹುದು" ಎಂದಿದ್ದಾರೆ.

ಪ್ಯಾಟ್ ಕಮ್ಮಿನ್ಸ್

ಓದಿ:ಪೃಥ್ವಿ ಶಾ ಬದಲು ಶುಬ್ಮನ್​ ಗಿಲ್ ಕಣಕ್ಕಿಳಿಯಲಿ: ಟಾಮ್ ಮೂಡಿ

"ಮೊದಲ ಇನ್ನಿಂಗ್ಸ್‌ನಲ್ಲಿ ನಾಥನ್ ಲಿಯಾನ್, ಪುಜಾರ ಅವರಿಗೆ ಉತ್ತಮವಾಗಿ ಬೌಲಿಂಗ್ ಮಾಡಿದರು. ಇದೇ ವೇಳೆ ಪುಜಾರ ನಿಜವಾಗಿಯೂ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ" ಎಂದು ಅವರು ಹೇಳಿದ್ದಾರೆ.

ABOUT THE AUTHOR

...view details