ದುಬೈ: ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ಆಡಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಅವರಿಗೆ ಕೊರೊನಾ ಪರೀಕ್ಷೆ ಮತ್ತೆ ಪಾಸಿಟಿವ್ ದೃಢಪಟ್ಟಿರುವುದರಿಂದ ಅವರು ಕ್ವಾರಂಟೈನ್‌ನಲ್ಲಿಯೇ ಮುಂದುವರಿಯಬೇಕಾಗಿದೆ.
ಎರಡು ವಾರಗಳ ಹಿಂದೆಯಷ್ಟೆ ಸಿಎಸ್ಕೆ ತಂಡದ ದೀಪಕ್ ಚಹಾರ್ ಹಾಗೂ ಋತುರಾಜ್ ಗಾಯಕ್ವಾಡ್ ಸೇರಿದಂತೆ 13 ಸಿಎಸ್ಕೆ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿತ್ತು. ಆದರೆ ಎಲ್ಲರಿಗೂ ಕ್ವಾರಂಟೈನ್ ಅವಧಿಯಲ್ಲಿ ನೆಗೆಟಿವ್ ಪಡೆದು ಚೇತರಿಕೆ ಕಂಡಿದ್ದರು.
ತಂಡದ ಸಹ ಆಟಗಾರ ದೀಪಕ್ ಚಹಾರ್ ಕೂಡ ಕೋವಿಡ್ 19ನಲ್ಲಿ ಪಾಸಿಟಿವ್ ಪಡೆದು ಈಗಾಗಲೆ ಬಯೋಬಬಲ್ ಪ್ರವೇಶಿಸಿದ್ದಾರೆ. ಸಿಎಸ್ಕೆ ಕೂಡ ಋತುರಾಜ್ ಗಾಯಕ್ವಾಡ್ ಆರಂಭಿಕ ಪಂದ್ಯಕ್ಕೆ ಲಭ್ಯರಾಗುತ್ತಾರೆ ಎಂದು ಭಾವಿಸಿತ್ತು. ಆದರೆ ಇತ್ತೀಚಿನ ಕೋವಿಡ್ ವರದಿ ಫ್ರಾಂಚೈಸಿ ಆಸೆಗೆ ತಣ್ಣೀರೆರಚಿದೆ. ಆದರೆ ಋತುರಾಜ್ ಅವರಿಗೆ ರೋಗದ ಯಾವುದೇ ಲಕ್ಷಣಗಳಿಲ್ಲ ಎಂದು ಸಿಎಸ್ಕೆ ಮೂಲಗಳಿಂದ ತಿಳಿದುಬಂದಿದೆ.
ಈಗಾಗಲೆ ವೈಯಕ್ತಿಕ ಕಾರಣಗಳಿಂದ ಟೂರ್ನಿಯಿಂದ ಹಿಂದೆ ಸರಿದಿರುವ ಸುರೇಶ್ ರೈನಾ ಅವರ ಜಾಗಕ್ಕೆ ಸೂಕ್ತ ಎನ್ನಲಾಗಿತ್ತು. ಆದರೆ ಈ ಬೆಳವಣಿಗೆಯಿಂದ ಸಿಎಸ್ಕೆ ಬೇರೆ ಆಲೋಚನೆ ಮಾಡಬೇಕಿದೆ. ರೈನಾ ಜಾಗಕ್ಕೆ ಅಂಬಾಟಿ ರಾಯುಡು ಆಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಐಪಿಎಲ್ ಸೆಪ್ಟೆಂಬರ್ 19ರಿಂದ ಆರಂಭವಾಗಲಿದೆ. ನವೆಂಬರ್ 10ರಂದು ಫೈನಲ್ ಪಂದ್ಯ ನಡೆಯಲಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಸೆಣೆಸಾಡಲಿವೆ.