ದುಬೈ: ಟೂರ್ನಿಯಿಂದ ಹೊರಬಿದ್ದಿರುವ ಸಿಎಸ್ಕೆ ತಂಡ ಔಪಚಾರಿಕವಾಗಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆಮಾಡಿಕೊಂಡಿದೆ.
ಸಿಎಸ್ಕೆ ತಂಡ ನಾಕ್ಔಟ್ ರೇಸ್ನಿಂದ ಹೊರಬಿದ್ದಿದ್ದು ಇದೊಂದು ಔಪಚಾರಿಕ ಪಂದ್ಯವಾಗಿದೆ. ಆದರೆ ಕೋಲ್ಕತ್ತಾ ತಂಡಕ್ಕೆ ಇಂದಿನ ಪಂದ್ಯ ಹೆಚ್ಚು ಮಹತ್ವದ್ದಾಗಿದೆ. ಆಡಿರುವ 12 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು 12 ಅಂಕ ಪಡೆದುಕೊಂಡಿದ್ದು, ನಾಕೌಟ್ ಹಂತಕ್ಕೆ ತಲುಪಬೇಕಾದ್ರೆ ಎಲ್ಲಾ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.
ಈ ಪಂದ್ಯದಲ್ಲಿ ಸಿಎಸ್ಕೆ 3 ಬದಲಾಣೆ ಮಾಡಿದೆ. ಮೋನುಕುಮಾರ್, ಫಾಫ್ ಡು ಪ್ಲೆಸಿಸ್ ಹಾಗೂ ತಾಹೀರ್ ಬದಲು, ಕರ್ನ್ ಶರ್ಮಾ, ವಾಟ್ಸನ್ ಹಾಗೂ ಎಂಗಿಡಿಗೆ ಅವಕಾಶ ನೀಡಿದೆ. ಕೆಕೆಆರ್ ಪ್ರಸಿದ್ ಕೃಷ್ಣ ಬದಲು ರಿಂಕು ಸಿಂಗ್ಗೆ ಅವಕಾಶ ನೀಡಿದೆ.
ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು 24 ಬಾರಿ ಮುಖಾಮುಖಿಯಾಗಿದ್ದು, 9 ಪಂದ್ಯಗಳಲ್ಲಿ ಕೆಕೆಆರ್ ಜಯದ ನಗೆ ಬೀರಿದ್ರೆ, 14 ಪಂದ್ಯಗಳಲ್ಲಿ ಸಿಎಸ್ಕೆ ಗೆಲುವು ಸಾಧಿಸಿದೆ. ಒಂದು ಪಂದ್ಯ ಯಾವುದೇ ಫಲಿತಾಂಶ ಕಂಡಿಲ್ಲ.